ರಕ್ತದಾನಿ ಕ್ರಿಯೇಟಿವ್ ಖಲೀಲ್ ಗೆ ನೆಲ್ಲಿಹುದಿಕೇರಿಯಲ್ಲಿ ಸನ್ಮಾನ

27/11/2020

ಮಡಿಕೇರಿ ನ.27 : ಅಮೂಲ್ಯ ಜೀವಗಳ ಆರೋಗ್ಯ ಸುಧಾರಣೆಗೆ ನಲವತ್ತು ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿರುವ ಸಮಾಜ ಸೇವಕ ಮಡಿಕೇರಿಯ ಕ್ರಿಯೆಟಿವ್ ಖಲೀಲ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ, ಬ್ಲಡ್ ಡೋನರ್ಸ್ ,ಆಟೋ ಚಾಲಕರ ಸಂಘದ ವತಿಯಿಂದ ನೆಲ್ಲಿಹುದಿಕೇರಿ ಶಾದಿಮಹಲ್ ನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.ಈ ಸಂದರ್ಭಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಟಿ ಸಂತೋಷ್ , ಮಹಿಳಾ ಘಟಕದ ಅಧ್ಯಕ್ಷೆ ವಿನೋದಿನಿ, ಉಪಾಧ್ಯಕ್ಷ ಪ್ರಕಾಶ್,ಪ್ರಧಾನ ಕಾರ್ಯದರ್ಶಿ ಬಾವಾ ಮಾಲ್ದಾರೆ ,ಕೊಡಗು ಬ್ಲಡ್ ಡೋನರ್ಸ್ ಸಂಘಟನೆಯ ಪ್ರಮುಖ ವಿನು, ಉಪಾಧ್ಯಕ್ಷ ಉನೈಸ್ , ಕರವೇ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಅನಿಲ್,ಸಮಾಜ ಸೇವಕರಾದ ಸೆಬಾಸ್ಟಿನ್, ಅಬ್ದುಲ್ಲಾ, ಭರತ್ ,ಸಿದ್ದಾಪುರ ಆಟೊ ಚಾಲಕರ ಸಂಘದ ಅಧ್ಯಕ್ಷ ಎಂ. ಆರ್  ಸಲೀಂ  ಸೇರಿದಂತೆ ಮತ್ತಿತರರು ಹಾಜರಿದ್ದರು.