ಬಡವರಿಗೆ ನಿವೇಶನ ನೀಡಲು ಒತ್ತಾಯ : ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆಯಿಂದ ಮನವಿ

November 27, 2020

ಮಡಿಕೇರಿ ನ.27 : ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ, ಕೊಡಗು ಜಿಲ್ಲಾ ಸಮಿತಿಯ ವತಿಯಿಂದ* ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ನಿವೇಶನ ರಹಿತ ಬಡ ಜನರಿಗೆ ಸೂರನ್ನು ಕಲ್ಪಿಸಬೇಕಾಗಿ  ಸೋಮವಾರಪೇಟೆ ತಾಲ್ಲೂಕು ಕಂದಾಯ ಪರಿವೀಕ್ಷಕರಿಗೆ ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭದ ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಷರಾದ  ಜಯಪ್ರಕಾಶ್  ಹೆಚ್.ಸಿ,ಮಹಿಳಾ ಜಿಲ್ಲಾಧ್ಯಕ್ಶರಾದ ಫಾತಿಮಾ ಖಾನ್,ಉಪಾಧ್ಯಕ್ಷ ರಾದ ಇಬ್ರಾಹಿಂ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝೈನುಲ್ ಆಬಿದ್. ಕೆ.ಎ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಆದಂ,ಕುಶಾಲನಗರ ಅಧ್ಯಕ್ಷರಾದ ಶರಣ್,ಸಂಗಮ ಚಾನಲ್ ಮಾಲಿಕರಾದ ಮೋಹನ್ ಕುಮಾರ್ ಹಾಗು ಇನ್ನಿತರರು ಹಾಜರಿದ್ದರು.

error: Content is protected !!