ಕಾರು ಅಪಘಾತ : ಐಗೂರು ಸಹಕಾರ ಸಂಘದ ಅಧ್ಯಕ್ಷರಿಗೆ ಗಾಯ

27/11/2020

ಸೋಮವಾರಪೇಟೆ ನ.27 : ಕಾರು ಅಪಘಾತದಲ್ಲಿ ಐಗೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಬೋಪಯ್ಯ ತೀವ್ರಗಾಯಗೊಂಡಿದ್ದಾರೆ.
ತಾಕೇರಿ ಗ್ರಾಮ ನಿವಾಸಿಯಾದ ಬೋಪಯ್ಯ ಗುರುವಾರ ತನ್ನ ಬ್ರೀಝಾ ಕಾರಿನಲ್ಲಿ ತಾಕೇರಿ ರಸ್ತೆಯ ಇಳಿಜಾರು ಜಾಗದಲ್ಲಿ ಸಂಚರಿಸುತ್ತಿದ್ದ ಸಂದರ್ಭ ದುದ್ದುಗಲ್ಲು ಸೇತುವೆ ಬಳಿ ಕಾರು ಅಪಘಾತಕ್ಕೀಡಾಗಿದೆ. ಬೆನ್ನು ಹಾಗು ಸೊಂಟದ ಭಾಗಕ್ಕೆ ತೀವ್ರ ಗಾಯಗೊಂಡ ಗಾಯಾಳುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ಕೊಡಿಸಿ ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಬೇರೆ ಯಾರು ಇರಲಿಲ್ಲ. ಶುಕ್ರವಾರ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರ:27ಎಸ್‍ಪಿಟಿ1-ಸೋಮವಾರಪೇಟೆ ಸಮೀಪದ ದುದ್ದಗಲ್ಲು ಸೇತುವೆ ಬಳಿ, ತಾಕೇರಿ ಗ್ರಾಮದ ಎಂ.ಎಂ.ಬೋಪಯ್ಯ ಅವರ ಕಾರು ಅಪಘಾತಕ್ಕೀಡಾಗಿರುವುದು.