ಆಕಸ್ಮಿಕ ಸಾವು : ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕ ಕೆ.ಜಿ.ಬೋಪಯ್ಯ

November 27, 2020

ಮಡಿಕೇರಿ ನ.27 : ಇಲ್ಲಿಗೆ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಇಬ್ಬರು ಸಾವಿಗೀಡಾದ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ರಾಜ್ಯ ಸರಕಾರ 2 ಲಕ್ಷ ರೂ.ಗಳ ಪರಿಹಾರ ಮಂಜೂರು ಮಾಡಿದ್ದು, ಪರಿಹಾರದ ಚೆಕ್‍ನ್ನು ಶಾಸಕ ಕೆ.ಜಿ.ಬೋಪಯ್ಯ ಅವರು ಕುಟುಂಬಕ್ಕೆ ಹಸ್ತಾಂತರಿಸಿದರು.
ಬಿಳಿಗೇರಿ ಗ್ರಾಮದ ಬಕ್ಕಬಾಣೆ ಕಾಲೋನಿ ನಿವಾಸಿ ಬಿ.ಕೆ.ಮೋಹನ್ ಅವರ ಪತ್ನಿ ಹಾಗೂ ಮಗಳು ಆ.8ರಂದು ಹೊಳೆ ಬದಿಗೆ ಹೋದಾಗ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಕೊಚ್ಚಿ ಹೋಗಿದ್ದರು. ಬಿ.ಕೆ.ಮೋಹನ್ ಅವರಿಗೆ 2 ಮಕ್ಕಳು ಹಾಗೂ ಒಬ್ಬ ಚಿಕ್ಕ ಗಂಡು ಮಗನಿದ್ದು, ಇವರು ಕೂಲಿಯಿಂದ ಜೀವನ ನಡೆಸುತ್ತಿದ್ದು, ಇತರ ಯಾವುದೇ ರೀತಿಯ ಆದಾಯ ಇಲ್ಲದ ಕಾರಣ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಶಾಸಕ ಕೆ.ಜಿ.ಬೋಪಯ್ಯ ಅವರು ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ರೂ.2 ಲಕ್ಷ ಗಳನ್ನು ಮಂಜೂರು ಮಾಡಿಸಿದ್ದರು. ಅದರಂತೆ ಶುಕ್ರವಾರ ನಗರದ ತಮ್ಮ ಕಚೇರಿಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಬಿ.ಕೆ.ಮೋಹನ್ ಅವರಿಗೆ 2 ಲಕ್ಷ ರೂ.ಗಳ ಚೆಕ್ ವಿತರಿಸಿದರುಳೀ ಸಂದರ್ಭ ತಹಶೀಲ್ದಾರ್ ಮಹೇಶ್ ಮತ್ತಿತರರು ಹಾಜರಿದ್ದರು.

error: Content is protected !!