ಮಂಗಳೂರಿನಲ್ಲಿ ಉಗ್ರರ ಪರ ಬರಹ

November 28, 2020

ಮಂಗಳೂರು ನ.27 : ಲಷ್ಕರ್ ಇ ತೊಯ್ಬಾ ಮತ್ತು ತಾಲಿಬಾನ್ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ರೀತಿಯಲ್ಲಿ ಕದ್ರಿ ಬಳಿ ಅಪಾರ್ಟ್ ಮೆಂಟ್ ಒಂದರ ಗೋಡೆ ಮೇಲೆ ಗೀಚುಬರಹ ಕಂಡುಬಂದಿದೆ. ಅಪಾರ್ಟ್ ಮೆಂಟ್ ನ ಕಂಪೌಂಡ್ ಮೇಲೆ ಯಾರೋ ಕಿಡಿಗೇಡಿಗಳು ಉಗ್ರ ಸಂಘಟನೆಗಳ ಪರ ಗೋಡೆ ಬರಹ ಬರೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಂಗಳೂರಿನ ಕದ್ರಿಯ ಸಕ್ರ್ಯೂಟ್ ಹೌಸ್ ನ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಒಂದರ ಕಂಪೌಂಡ್ ಮೇಲೆ ಹ್ಯಾಶ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆದು ಇಂಗ್ಲಿಷ್ ನಲ್ಲಿ ಆo ಟಿoಣ ಜಿoಡಿಛಿe us ಣo iಟಿviಣe ಐಚಿshಞಚಿಡಿe-ಖಿoibಚಿ ಚಿಟಿಜ ಖಿಚಿಟibಚಿಟಿ ಣo ಜeಚಿಟ ತಿiಣh Sಚಿಟಿghis ಚಿಟಿಜ ಒಚಿಟಿveಜis’ ಎಂದು ಬರೆದಿದ್ದಾರೆ. ಈ ಗೋಡೆಬರಹ ಪತ್ತೆಯಾದ ಕೂಡಲೇ ಸುತ್ತಮುತ್ತ ಇರುವ ಎಲ್ಲಾ ಸಿಸಿಟಿವಿ ಕ್ಯಾಮರಾಗಳನ್ನು ತಪಾಸಣೆ ಮಾಡಲಾಗಿದೆ. ಈ ಗೀಚುಬರಹವನ್ನು ಯಾರು ಬರೆದಿದ್ದಾರೆ, ಯಾವಾಗ ಬರೆದಿದ್ದಾರೆ, ಎಲ್ಲಿಯವರು ಎಂದು ಎಲ್ಲಾ ಸಾಧ್ಯತೆಗಳ ಬಗ್ಗೆ ತಪಾಸಣೆ ಮಾಡುತ್ತಿದ್ದೇವೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.
ಗೋಡೆಯ ಮೇಲೆ “ಲಷ್ಕರ್ ಜಿಂದಾಬಾದ್” ಬರೆದವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಹಲವಾರು ಹಿಂದೂ ಸಂಘಟನೆಗಳ ಸ್ವಯಂಸೇವಕರು “ಧರಣಿ” ನಡೆಸಿದ್ದಾರೆ.

error: Content is protected !!