ವಿಕಲಚೇತನರಿಂದ ಅರ್ಜಿ ಆಹ್ವಾನ

28/11/2020

ಮಡಿಕೇರಿ ನ.28 : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿವಿಧ ಯೋಜನೆಗಳಾದ ವಿಕಲಚೇತನರ ಗುರುತಿನ ಚೀಟಿ, ವಿದ್ಯಾರ್ಥಿ ವೇತನ, ಸಾಧನ ಸಲಕರಣೆ, ಆಧಾರ ಯೋಜನೆ, ಗ್ರಾಮೀಣ ಪುನರ್ವಸತಿ ಯೋಜನೆ, ವೈದ್ಯಕೀಯ ಪರಿಹಾರ, ವಿಕಲಚೇತನ ವ್ಯಕ್ತಿಯೊಡನೆ ಸಾಮಾನ್ಯ ವ್ಯಕ್ತಿಯ ವಿವಾಹ ಯೋಜನೆ, ಶುಲ್ಕ ಮರುಪಾವತಿ ಯೋಜನೆ, ಸಾಧನೆ ಪ್ರತಿಭೆ, ಯಂತ್ರಚಾಲಿತ ತ್ರಿಚಕ್ರ ವಾಹನ ಯೋಜನೆ, ಲ್ಯಾಪ್‍ಟಾಪ್ ಯೋಜನೆ, ಶಿಶು ಪಾಲನಾ ಭತ್ಯೆ ಹೀಗೆ ಸೌಲಭ್ಯಗಳನ್ನು ಹೊಂದಿಕೊಳ್ಳಲು ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿಕಲಚೇತನರ ಗುರುತಿನ ಚೀಟಿ : ಇಲಾಖೆಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಯೋಜನೆಯಿದ್ದು, ವಿಕಲಚೇತನರು ಗುರುತಿಸಿಕೊಳ್ಳಲು ಕನಿಷ್ಠ ಶೇ.40 ವಿಕಲಚೇತನತೆಯನ್ನು ಹೊಂದಿರಬೇಕು. ವಿಕಲಚೇತನರ ಗುರುತಿನ ಚೀಟಿಯನ್ನು ಹೊಂದಿಕೊಳ್ಳಲು ಯುಡಿಐಡಿ ವೆಬ್ ಸೈಟ್‍ನಲ್ಲಿ ನೋಂದಾಯಿಸಿಕೊಳ್ಳಬೇಕಾಗಿದೆ. ನೋಂದಾಯಿತ ಅರ್ಜಿಗಳನ್ನು ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೋಧಕ ಆಸ್ಪತ್ರೆ, ಮಡಿಕೇರಿ ಇವರ ಮುಖಾಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಇಲಾಖೆಯಿಂದ ತಪಾಸಣೆಗೆ ಒಳಪಟ್ಟು ಜಿಲ್ಲಾ ಆಸ್ಪತ್ರೆ ಮೂಲಕ ವಿಶಿಷ್ಟ ಗುರುತಿನ ಚೀಟಿಗಳು ನೇರವಾಗಿ ವಿಕಲಚೇತನರ ಮನೆಗೆ ಅಂಚೆ ಮೂಲಕ ತಲುಪುತ್ತಿದೆ. ನವೆಂಬರ್, 30 ರಿಂದ ಡಿಸೆಂಬರ್ 12 ರವರೆಗೆ ವಿಕಲಚೇತನರ ಪಾಕ್ಷಿಕ ಆಚರಿಸುತ್ತಿದ್ದು ಯುಡಿಐಡಿ ಕಾರ್ಡ್‍ಗೆ ಅರ್ಜಿ ಸಲ್ಲಿಸುವವರು ಹಾಗೂ ಸಲ್ಲಸದೇ ಇರುವ ವಿಕಲಚೇತನರು ತಮ್ಮ ತಾಲ್ಲೂಕಿನ ಎಂಆರ್‍ಡಬ್ಲ್ಯುಗಳ ಮುಖಾಂತರ ವಿಕಲಚೇತನ ಫಲಾನುಭವಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಯುಡಿಐಡಿ ಕಾರ್ಡ್‍ಗಳನ್ನು ಪಡೆಯಲು ಎಂಆರ್‍ಡಬ್ಲ್ಯು ಹಾಗೂ ವಿಆರ್‍ಡಬ್ಲ್ಯುಗಳನ್ನು ಸಂಪರ್ಕಿಸುವಂತೆ ಕೋರಿದೆ.

ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ.08272-295829 ಇಲ್ಲಿಗೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಡಿಕೇರಿ ತಾಲ್ಲೂಕಿನ ಎಂಆರ್‍ಡಬ್ಲ್ಯು ಇವರ ಮೊ.ಸಂ.8073192914, ಸೋಮವಾರಪೇಟೆ ತಾಲ್ಲೂಕಿನ ಎಂಆರ್‍ಡಬ್ಲ್ಯು ಇವರ ಮೊ.ಸಂ.9008685129 ಹಾಗೂ ವಿರಾಜಪೇಟೆ ತಾಲ್ಲೂಕಿನ ಎಂಆರ್‍ಡಬ್ಲ್ಯು ಇವರ ಮೊ.ಸಂ.9900883654 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.