ರುಚಿಕರವಾದ ಮೀನಿನ ಟಿಕ್ಕಾ ಮಾಡುವ ವಿಧಾನ

28/11/2020

ತಯಾರಿಸಲು ಬೇಕಾಗುವ ಸಾಮಾಗ್ರಿಗಳು: 1/2 ಕೆಜಿ ಮೀನಿನ ತುಂಡುಗಳು (ಯಾವ ಮೀನು ಬೇಕಾದರೂ ಆಗಬಹುದು), 150 ಗ್ರಾಂ ವನಸ್ಪತಿ, 1 ಚಮಚ ಅಜ್ವೈನ್, 2 ಚಮಚ ಜೀರಿಗೆ ಪುಡಿ, 2ಚಮಚ ಗರಂ ಮಸಾಲ, 1 ಚಮಚ ಬೆಳ್ಳುಳ್ಳಿ ಪೇಸ್ಟ್, 2 ಚಮಚ ಮೈದಾ, ನಿಂಬೆರಸ, 5 ಚಮಚ ಪುದೀನಾ ಅಥವಾ ಕೊತ್ತಂಬರಿ ಪೇಸ್ಟ್, 1/2 ಚಮಚ ಕರಿಮೆಣಸಿನ ಪುಡಿ, ಕತ್ತರಿಸಿದ ಈರುಳ್ಳಿ 1, 60 ಗ್ರಾಂ ಮೊಸರು, 1/4 ಚಮಚ ಅರಿಶಿಣ ಪುಡಿ, ಖಾರಕ್ಕೆ ತಕ್ಕ ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು,

ತಯಾರಿಸುವ ವಿಧಾನ: ಬೆಳ್ಳುಳ್ಳಿ ಪೇಸ್ಟ್, ಅಜ್ವೈನ್, ಜೀರಿಗೆ ಪುಡಿ, ಗರಂ ಮಸಾಲ ಪುಡಿ, ಸ್ವಲ್ಪ ನಿಂಬೆ ರಸ, ಪುದೀನಾ ಅಥವಾ ಕೊತ್ತಂಬರಿ ಪೇಸ್ಟ್, ಉಪ್ಪು, ಕೆಂಪು ಮೆಣಸಿನ ಪುಡಿ,ಮ ಕರಿಮೆಣಸಿನ ಪುಡಿ, ಅರಿಶಿಣ ಪುಡಿಯನ್ನು ಮೊಸರಿನಲ್ಲಿ ಹಾಕಿ ಮಿಶ್ರ ಮಾಡಬೇಕು. ಈ ಮಿಶ್ರಣಕ್ಕೆ ಮೀನಿನ ತುಂಡುಗಳನ್ನು ಹಾಕಿ ಮಿಶ್ರ ಮಾಡಿ 3 ಗಂಟೆ ಕಾಲ ಇಡಬೇಕು.

ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಅದರಲ್ಲಿ ಮೀನಿನ ತುಂಡುಗಳನ್ನು ಹಾಕಿ ಕರಿದು ತೆಗೆಯಬೇಕು. ಈಗ ತಯಾರಿಸಿದ ಟಿಕ್ಕಾವನ್ನು ತಟ್ಟೆಗೆ ಹಾಕಿ, ಕತ್ತರಿಸಿದ ಈರುಳ್ಳಿ ಮತ್ತು ನಿಂಬೆ ಹಣ್ಣಿನ ತುಂಡುಗಳನ್ನು ಇಟ್ಟು ಬಡಿಸಬೇಕು.