ನಾವು ಕಿವಿಗಳನ್ನು ಏಕೆ ಚುಚ್ಚಬೇಕು ?

28/11/2020

ಭಾರತ ಜನರ ಆಚಾರದಲ್ಲಿ ಕಿವಿ ಚಚ್ಚುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಭಾರತದ ವೈದ್ಯರು ಮತ್ತು ತಂತ್ರಜ್ಞಾನಿಗಳು ಬುದ್ಧಿ ಹೆಚ್ಚಳಕ್ಕೆ ಕಿವಿ ಚುಚ್ಚುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಯೋಚನಾ ಶಕ್ತಿ ಹೆಚ್ಚಳ ಮತ್ತು ವಿಮರ್ಶನಾ ಶಕ್ತಿ ಹೆಚ್ಚಳವಾಗುತ್ತದೆ ಎಂದು ತಿಳಿಸಿದ್ದಾರೆ. ಅತಿ ಮಾತು ದೇಹದ ಶಕ್ತಿಯನ್ನು ಕಂಠಿತಗೊಳಿಸುತ್ತದೆ. ಮೇಲಾಗಿ ಮಾತಿನ ತಪ್ಪುಗಳನ್ನು ತಿದ್ದಲು ಅನುಕೂಲವಾಗುತ್ತದೆ. ಕಿವಿಯ ಧ್ವನಿ ತರಂಗಗಳನ್ನು ಕ್ರಮ ಪಡಿಸುತ್ತದೆ. ಪಾಶ್ಚಾತ್ಯರಲ್ಲಿ ಈ ರೂಢಿ ಇದ್ದರೂ ಅವರು ಅಂದ ಚಂದಕ್ಕಾಗಿ ಕಿವಿ ಚುಚ್ಚಿಕೊಂಡು ಉಂಗುರ ಬಳಕೆಗಳನ್ನು ಹಾಕಿಕೊಳ್ಳುತ್ತಾರೆ.

ಭಾರತೀಯ ಸಂಸ್ಕೃತಿಯ ಪ್ರಕಾರ ಹುಟ್ಟಿದ ಮಗು ಗಂಡು-ಹೆಣ್ಣು ಯಾವುದೇ ಆಗಿದ್ರು 8 ತಿಂಗಳ ಮೊದಲೇ ಕಿವಿ ಚುಚ್ಚಲೇ ಬೇಕು ಅದು ಈಗಿನ ಕಾಲದಿಂದ ಬಂದಿರುವ ನಿಯಮವಲ್ಲ. ಶತಶತಮಾನಗಳಿಂದ ಬಂದಿರುವ ಪದ್ದತಿಯಾಗಿದೆ. ಅದ್ರಲಿ ಹೆಣ್ಣುಮಕ್ಕಳಿಗೆ ಅಂತ್ರು ಕೀವಿ ಚುಚ್ಚಲೇ ಬೇಕು ಇದೇಕಾರಣಕ್ಕೆ ಚಿಕ್ಕಮಗು ಇದ್ದಾಗನೆ ಕೀವಿ ಚುಚ್ಚಿ ಕಿವಿಓಲೇ ಹಾಕಿಬಿಡುತ್ತಾರೆ. ಹಾಗೆಯೇ ಎಲ್ಲಾ ಧರ್ಮದಲ್ಲಿವೂ ದೇಹದ ಯಾವುದಾದರು ಒಂದು ಭಾಗಕ್ಕೆ ಹೋಲ್ ಮಾಡಿ ಬಂಗಾರದ ಒಡೆವೆಯನ್ನು ದರಿಸುತ್ತಾರೆ. ಇದಕ್ಕೆ ಆಯುರ್ವೇದ ಪ್ರಕಾರ ಹಲವಾರು ಕಾರಣಗಳು ಇವೆ.

ಕಿವಿ ಚುಚ್ಚುವುದರಿಂದ ಹೆಣ್ಣುಮಕ್ಕಳಿಗೆ ಬಹಳಷ್ಟು ಅನುಕೂಲಗಳಿವೆ ಅದರಲ್ಲಿ ಜನನಾಂಗಳ ರಕ್ಷಣೆ ಮತ್ತು ಆರೋಗ್ಯಕರ ಋತುಚಕ್ರವಾಗಲು ಮುಖ್ಯವಾಗಿದೆ. ಕೀವಿಗಳ ಕೆಳಗಡೆ ಇರುವ ಮೆತ್ತನೆಯ ಜಾಗದ ನಟ್ಟನಡು ಇರುವ ನರಗಳು ತಲೆಯ ಭಾಗ ಮತ್ತು ಮೆದುಳಿನ ಮೇಲೆ ನೇರವಾದ ಸಂಪರ್ಕವನ್ನು ಹೊಂದಿವೆ, ಅದರಿಂದ ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗೆ ಋತುಚಕ್ರಗಳು ಸರಿಯಾಗಿ ನಡೆಯಲು ಸಹಾಯವಾಗುತ್ತೆ, ಮೆದುಳಿನ ಬೆಳವಣಿಗೆಯಲ್ಲಿ ಪ್ರಮುಖವಾದ ಪಾತ್ರವಹಿಸುತ್ತೆ. ವೈದರ ಪ್ರಕಾರ ಕಿವಿ ಚುಚ್ಚಿದ ಭಾಗದಲ್ಲಿರುವ ನರಗಳು ಮೆದುಳಿನ ನರಗಳಿಗೆ ಸಂಪರ್ಕ ಹೊಂದಿ ಕೆಲಸದಲ್ಲಿ ನಿರಂತರವಾದ ವೇಗವನ್ನು ಹೆಚ್ಚಿಸುತ್ತದೆ.

ಆಯುರ್ವೇದ ಪ್ರಕಾರ ಗಂಡು ಮಗುವಿಗೆ ಬಲಕಿವಿಗೆ ಹೆಣ್ಣುಮಗುವಿಗೆ ಎಡ ಕಿವಿಗೆ ಚುಚ್ಚುವುದು ತಿಳಿಸುತ್ತೇ ಏಕೆಂದರೆ ಗಂಡು ಮತ್ತು ಹೆಣ್ಣು ಮಕ್ಕಳ ಲಿಂಗಕ್ಕೆ ಅನುಗುಣವಾಗಿ ಮೆದುಳಿನ ಸಂವೇದನೆ ಬೇರೆಬೇರೆಯಾಗಿದೆ ಬಲಮೆದುಳು ಎಡ ದೇಹದವನ್ನು ಎಡಮೆದುಳು ಬಲಭಾಗದ ದೇಹವನ್ನು ನಿಯಂತ್ರಿಸುತ್ತೆ, ಮತ್ತು ಹೆಣ್ಣುಮಕ್ಕಳಿಗೆ ಕಿವಿಓಲೇ ಸೌದರ್ಯಮಯವಾಗಿದೆ ಆದರಿಂದ ಹೆಣ್ಣುಮಕ್ಕಳು ಎರಡು ಕಿವಿಗೆ ರಿಂಗ್ ಹಾಕಿಕೊಳುವುದು ಸಾಮಾನ್ಯವಾಗಿದೆ.

ಈ ಎಲ್ಲಾ ವಿಷಯವನ್ನು ತಿಳಿದ ಚೀನಿಯರು ನರಗಳು ಇರುವ ದೇಹದ ಕೆಲವೊಂದು ಭಾಗಗಳಿಗೆ ಸೂಜಿ ಚುಚ್ಚುವ ಮೂಲಕ ಧಿರ್ಘವಾಗಿ ಚಿಕಿತ್ಸೆ ಪಡೆಯುತ್ತಾರೆ ಏಕೆಂದರೆ ಇದರಿಂದ ಮೆದಳಿಗೆ ಹೆಚ್ಚಿನ ವೇಗ, ನೆನಪಿನ ಶಕ್ತಿ, ಕೌಶ್ಯಲತೆ ದೊರೆತು ದಿನನಿತ್ಯೆದ ಕೆಲಸದಲ್ಲಿ ಚುರುಕಾಗುತ್ತಾರೆ ಇದನ್ನೇ ಆಯುರ್ವೇದದಲ್ಲಿ ‘ಮುದ್ರೆಗಲ್ಲಿ” ಇಲ್ಲ ‘ಮುರ’ ವೆಂದು ಕರೆಯುತ್ತಾರೆ ಆದರಿಂದ ಯಾವುದೇ ಮಗುವಿಗೆ 8 ತಿಂಗಳ ಒಳಗೆ ಕಿವಿ ಚುಚ್ಚುವುದರಿಂದ ಮಗುವಿನ ಬೆಳೆವಣಿಗೆಗೆ ಸಹಾಯಕವಾಗುತ್ತೆ. ತಲೆಯ ಗಂಟುಗಳಿಗೆ ರಾಮಬಾಣವಾಗಿದೆ. ತಲೆಯ ಮತ್ತು ಕುತ್ತಿಗೆ ನರಗಳು ತೊಡಕುವುದರಿಂದ ತಲೆಯಲ್ಲಿ ಚಿಕ್ಕ ಚಿಕ್ಕ ಗಂಟುಗಳು, ಮಡವೆಗಳು ಆಗುವುದು ಸಾಮಾನ್ಯ ಅವುಗಳಿಂದ ಕಿವುತುಂಬಿ ನೂವುಕಾಣಿಸುತ್ತೆ ದಿನನಿತ್ಯದ ಕೆಲಸದಲ್ಲಿ ತೊಂದರೆವುಂಟು ಮಾಡುತ್ತೆ,ಈ ಚುಚ್ಚುಮದ್ದು ಇಂತಹ ತೊಂದರೆಗಳು ಆಗದಹಾಗೆ ತಡೆಯಿತ್ತೆ. ಕಣ್ಣುಗಳ ದೃಷ್ಟಿಯನ್ನು ಚುರುಕುಗೊಳಿಸುತ್ತೆ ವೈದರ ಪ್ರಕಾರ ಕಿವಿಯ ಮೃದುವಾದ ಭಾಗಕ್ಕೆ ಧೀರ್ಘವಾಗಿ ಚುಚ್ಚಿದ್ದರೆ ಕಣ್ಣಿನ ಸೌದರ್ಯವನ್ನು ಹೆಚ್ಚಿಸುತ್ತೆ ಇದನ್ನುಸಾವಿರಾರು ವರ್ಷಗಳ ಹಿಂದೆಯ ಆಯುರ್ವೇದ ಶಾಸ್ತ್ರ ತಿಳಿಸಿದೆ.

ಕಿವಿಗಳ ಆರೋಗ್ಯವನ್ನು ಉತ್ತಮವಾಗಿ ಇಡುತ್ತೆ: ಕೀವಿಗಳನ್ನು ಚುಚ್ಚುವ ಎರಡು ಒತ್ತಡ ಭಾಗಗಳು ಮೆದುಳಿಗೆ ಪ್ರಚೋದನೆ ನೀಡುತ್ತೆ ಇದರಿಂದ ಕೀವಿಯ ಶ್ರವಣಶಕ್ತಿಯನ್ನು ಉತ್ತಮಗೊಳಿಸುತ್ತೆ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತೆ ಕೀವಿಗೂ ಜೀರ್ಣಕ್ರಿಯೇಗೂ ದೂರದ ಸಂಭಂದ ಅನಿಸಬಹುದು ಆದ್ರೆ ವೈದರ ಪ್ರಕಾರ ಈ ಭಾಗದಲ್ಲಿ ಹಸಿವಿನ ಕೇಂದ್ರವು ಅಡಗಿಂದು ಕರಳುಗಳಲ್ಲಿ ಹಸಿವಿನ ಸೂಚನೆಯನ್ನು ವೇಗವಾಗಿ ಸೂಚಿಸುತ್ತೆ ಆದರಿಂದ ಕೀವಿ ಚುಚ್ಚಿದ ಮಗು ಬೇಕ್ಕಾದಷ್ಟು ಊಟತಿಂದು ಸದೃಡವಾಗಿ ಇರುತ್ತೆ ಹಿಂದಿನ ಕಾಲದಲ್ಲಿ ಊಟಕ್ಕೆ ಸಂಭದಿಸಿದ ಯಾವುದೇ ಖಾಯಿಲೆಗೆ ತಾಮ್ರದ ‘ಮುರ’ ಚುಚ್ಚುವುದರಿಂದ ಹಸಿವಿನ ಸಮಸ್ಯೆ ನಿವಾರಣೆ ಆಗುತ್ತಿತು. ನರಸಂಭಂಧಿ ಖಾಯಿಲೆಗಳಿಂದ ರಕ್ಷಿಸುತೆ ವೈದರ ಪ್ರಕಾರ ಕೀವಿ ಚುಚ್ಚಿದ ಮಕ್ಕಳು ಮಾನಸಿಕವಾಗಿ ಹೆಚ್ಚು ಸದೃಡರಾಗಿರುತ್ತಾರೆ. ಇದರಿಂದ ಉದ್ವೇಗ ಆತಂಕ ಒಂದೇ ತರದ ಯೋಚನೆಯನ್ನು ದೂರಮಾಡುತ್ತೆ ಹಾಗೆ ಯೋಚನಾ ಶಕ್ತಿಯನು ಉತ್ತಮಗೊಳಿಸುತ್ತೆ. ಆದರಿಂದ ಹಿಂದಿನಕಾಲದ ಕೆಲವೊಂದು ಪದ್ದತಿ ಮೂಡನಂಬಿಕೆ ಅನಿಸಿದ್ರು ಅದರಿಂದ ನೂರಾರು ಉಪಯೋಗಗಳು ಇರುವುದು ದೃಡಪಟಿವೆ.