ನ.30 ರಂದು ಸಿಎನ್‍ಸಿಯಿಂದ ಪುತ್ತರಿ ನಮ್ಮೆ ಆಚರಣೆ

November 28, 2020

ಮಡಿಕೇರಿ ನ. 28 : ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಆಶ್ರಯದಲ್ಲಿ 27ನೇ ವಾರ್ಷಿಕ ಸಾರ್ವತ್ರಿಕ ಪುತ್ತರಿ ನಮ್ಮೆ (ಕೊಡವ ಬುಡಕಟ್ಟು ಜಗತ್ತಿನ ಬೆಳೆ ಕೊಯ್ಲು ಉತ್ಸವ) ಧಾನ್ಯಲಕ್ಷ್ಮಿಯನ್ನು ಮನೆಗೆ ಆಹ್ವಾನಿಸುವ ಶುಭ ದಿನಾಚರಣೆಯನ್ನು ನ.30 ರಂದು ನಡೆಸಲಾಗುವುದೆಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10.30ಕ್ಕೆ ಚಿಕ್ಕಬೆಟ್ಟಗೇರಿಯ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಸಾಂಪ್ರಾದಾಯಿಕ ಕದಿರು ತೆಗೆಯುವ ಶಾಸ್ತ್ರ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.

error: Content is protected !!