ಮಾದಾಪುರ ಸಹಕಾರ ಸಂಘಕ್ಕೆ 33,43,673 ಲಾಭ : ಸಾಧಕರಿಗೆ ಸನ್ಮಾನ

November 28, 2020

ಸುಂಟಿಕೊಪ್ಪ,ನ.28 : ಮಾದಾಪುರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ 33,43,673 ರೂ.ಗಳ ಲಾಭಗಳಿಸಿ ‘ಎ’ ತರಗತಿ ಹೊಂದಿದೆ ಎಂದು ಸಂಘದ ಅಧ್ಯಕ್ಷ ಬಿಜ್ಜಂಡ ಎ. ಮೊಣ್ಣಪ್ಪ ತಿಳಿಸಿದರು.
ಸಂಘದ 2019-2020ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ಅಧ್ಯಕ್ಷರಾದ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು ಆಧುನೀಕರಣಗೊಳಿಸಿದ್ದು, ಸಂಪೂರ್ಣ ಕಂಪ್ಯೂಟರಿಕರಣದಲ್ಲಿ ವ್ಯವಹಾರ ನಡೆಯಲಿರುವುದರಿಂದ ಸದಸ್ಯರುಗಳು ಪಡೆದ ಸಲವನ್ನು ನಗದುರೂಪದಲ್ಲಿ ಸಲ್ಲಿಸಿ ಸಹಕರಿಸಬೇಕು, ಇಂಟರ್‍ಲಾಕ್ ಅಳವಡಿಸಲಾಗಿದೆ. ಸಂಘದ ಖಾಲಿ ಜಾಗದಲ್ಲಿ ಗೋದಾಮು ಕಟ್ಟಡ ನಿರ್ಮಿಸಲಾಗುವುದು ಗೊಬ್ಬರ, ಕ್ರಿಮಿನಾಶಕ ಸಿಮೆಂಟ್, ಕೃಷಿ ಉಪಕರಣಗಳನ್ನು ರೈತರು ಸಂಘದಿಂದ ಪಡೆದುಕೊಂಡು ಸಂಘ ಏಳಿಗೆಗೆ ಸಹಕರಿಸಬೇಕೆಂದು ಅಧ್ಯಕ್ಷರು ಹೇಳಿದರು.
ಗೊಬ್ಬರ ಸಾಲವನ್ನು ಶೇಕಡ 10 ಬಡ್ಡಿ ದರದಲ್ಲಿ ವಿತರಿಸುವ ಬದಲು ಶೇಕಡ 8 ರ ಬಡ್ಡಿದರದಲ್ಲಿ ಸದಸ್ಯರಿಗೆ ನೀಡಬೇಕೆಂದು ಮಂದೆಯಂಡ,ಗಣೇಶ,ಪೊಡನೋಳಂಡ ಮೋಹನ್, ಪಿ.ಎಸ್.ರತೀಶ ಆಗ್ರಹಿಸಿದರು.
ಆಭರಣ ಸಾಲದ ಬಡ್ಡಿ ಶೇಕಡ 10ರಿಂದ 9ಕ್ಕೆ ಇಳಿಸಲಾಗಿದೆ.ಕೃಷಿಯೇತರ ಸಾಲವನ್ನು ಸದಸ್ಯರಿಗೆ ಶೇಕಡ 10 ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಬೈಲಾ ತಿದ್ದುಪಡಿಯಂತೆ ಜಾಮೀನು ಸಾಲವನ್ನು 20,000 ರೂ ನಿಂದ 50,000 ರೂವರೆಗೆ ಹೆಚ್ಚಸಲು ತಿರ್ಮಾನಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎಸ್.ಕಾವೇರಪ್ಪ ಸಭೆಗೆ ತಿಳಿಸಿದರು.
ವಾಹನ ಸಾಲದ ಬಡ್ಡಿ ಶೇಕಡ 10 ರಷ್ಟು ಇರುವುದನ್ನು ಇಳಿಸಬೇಕು ಎಂದು ಎಂ.ಪಿ.ಮನುಮೇದಪ್ಪ ಆಗ್ರಹಿಸಿದರು. ಆಭರಣ ಲಾಕರ್‍ನಲ್ಲಿ ಭದ್ರತೆ ಹೆಚ್ಚಿಸಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಮಂದೆಯಂಡ ಗಣೇಶ ಹೇಳಿದರು.
ವೇತನ ಸಾಲ ನೀಡುವಾಗ ಎಚ್ಚರ ವಹಿಸಬೇಕು ವೇತನದ ದೃಢೀಕರಣ ದಾಖಲೆ ಅಧಿಖಾರಿಗಳು ಇತ್ತೀಚೆಗೆ ನೀಡುವಂತಿಲ್ಲ ಎಂದು ಹೇಳಿದರು.
ಸಂಘದ ಬೆಳವಣಿಗೆಗೆ ಜಾಗ ಖರೀದಿಸುವ ಉದ್ದೇಶವಿದ್ದಿ, ಅದರಿಂದ ವ್ಯಾಪಾಆರ ವಹಿವಾಟು ಅಭಿವೃದ್ಧಿ ಪಡಿಸಲಾಗುವುದು ಜಗ ಇದ್ದರೆ ತಿಳಿಸಿ ಎಂದು ಸದಸ್ಯರುಗಳ ಎಲ್ಲಾ ಪ್ರಶ್ನೆಗಳಿಗೆ ಸಾವದಾನದಿಂದ ಸಿಇಓ ಕಾವೇರಪ್ಪ ವಿವರಣೆ ನೀಡಿದರು.
ಮಾದಾಪುರ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರೂ ನಿರ್ದೇಶಕರಾದ ಪಿ.ಪಿ.ತಿಲಕ್‍ಕುಮಾರ್ ಹಾಗೂ ನಾಪಂಡ ಉಮೇಶ್ ಉತ್ತಪ್ಪ ಕ್ರಮವಗಿ ಕುಶಾಲನಗರ ಎಪಿಎಂಸಿ ನಿರ್ದೇಶಕರೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರೂ ಆಗಿ ಆಯ್ಕೆಯಾಗಿದಕ್ಕಾಗಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
10ನೇ ತರಗತಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂಘದ ಸದಸ್ಯರುಗಳ ಮಕ್ಕಳು ಅತಿ ಹೆಚ್ಚು ಅಂಕಗಳಿಸಿ ಉತ್ರ್ತೀಣಗೊಂಡ ಮಕ್ಕಳಿಗೆ ಪ್ರೋತ್ಸಹ ಧನ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಪಿ.ಪಿ.ತಿಲಕ್ ಕುಮಾರ್ ಸಿಇಓ ಕಾವೇರಪ್ಪ ನಿರ್ದೇಶಕರುಗಳಾದ ನಾಪಂಡ ಉಮೇಶ್ ಉತ್ತಪ್ಪ, ಸಿ.ಎ.ತಮ್ಮಯ್ಯ, ಎನ್.ಸಿ.ಕಾಳಪ್ಪ, ಎನ್.ಎಸ್.ಬೆಳ್ಯಪ್ಪ, ಬಿ.ಎ.ಧೂಮಪ್ಪ, ಕೆ.ಎ.ಲತೀಫ್, ಪಿ.ಇ.ನಳಿನಿ ತಮ್ಮಯ್ಯ, ಎಂ.ಸಿ.ಪೊನ್ನವ್ವ,ಜೆ.ಆರ್.ಕೃಷ್ಣ, ರೇಣುಕಮ್ಮ,ಎಂ.ವೈ.ಕೇಶವ,ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್ ಉಪಸ್ಥಿತರಿದ್ದರು.

error: Content is protected !!