ವಿವಿಧ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್

28/11/2020

ಮಡಿಕೇರಿ ನ.28 : ನಗರಸಭೆ ವ್ಯಾಪ್ತಿಯಲ್ಲಿ ಎಸ್‍ಎಫ್‍ಸಿ ವಿಶೇಷ ಅನುದಾನದಲ್ಲಿ ಮೂರು ಕಾಮಗಾರಿಗಳ ಒಟ್ಟು 40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ, ಕಾಂಕ್ರೀಟ್ ಹಾಗೂ ಡಾಂಬಾರು ರಸ್ತೆಯನ್ನು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಶನಿವಾರ ಉದ್ಘಾಟಿಸಿದರು.
ನಗರದ ಕುಮಾರ ವಿಲಾಸದಿಂದ ಲಿಂಗಪ್ಪ ಮನೆವರೆಗೆ ಕಾಂಕ್ರೀಟ್ ರಸ್ತೆ, ಟಿ.ಜಾನ್ ಬಡಾವಣೆಯ ರಸ್ತೆ ಹಾಗೂ ಮಹದೇವಪೇಟೆಯ ಮಠದ ರಸ್ತೆಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು ನಗರದ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳಾನ್ನಾಗಿ ನಿರ್ಮಿಸಲಾಗುವುದು, ಮುಂದಿನ ದಿನಗಳಲ್ಲಿ ಸರ್ವಋತು ರಸ್ತೆಗಳನ್ನಾಗಿ ಮಾಡಲಾಗುವುದು ಎಂದು ಎಂ.ಪಿ.ಅಪ್ಪಚ್ಚು ರಂಜನ್ ಅವರು ತಿಳಿಸಿದರು.

ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಪ್ರಮುಖರಾದ ಟಿ.ಎಸ್.ಪ್ರಕಾಶ್, ರಮೇಶ್, ಬಿ.ಕೆ.ಜಗದೀಶ್, ಉಮೇಶ್ ಸುಬ್ರಮಣಿ, ಅನಿತಾ ಪೂವಯ್ಯ, ಸವಿತಾ ರಾಕೇಶ್, ನವೀನ್ ಪೂಜಾರಿ, ಮಹೇಶ್ ಜೈನಿ, ಮನು ಮಂಜುನಾಥ್, ಅರುಣ್ ಕುಮಾರ್, ಜೀವನ್, ಗೌರಮ್ಮ, ಶ್ವೇತಾ, ಇತರರು ಇದ್ದರು.