ಸಿದ್ದಾಪುರದಲ್ಲಿ ಶ್ರೀರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿಗಳ ಸಮಾವೇಶ

28/11/2020

ಮಡಿಕೇರಿ ನ. 28 : ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯು ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸದೊಂದಿಗೆ ಶಿಸ್ತು ಹಾಗೂ ಸಾರ್ವಜನಿಕ ಸೇವಾ ಕಾರ್ಯಕ್ಕೆ ತೊಡಗಿಸುವ ಮನಸ್ಸನ್ನು ಕಲಿಸುತ್ತದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ನುಡಿದರು.
ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆ ಮತ್ತು ಅದರ ಹಳೆ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರ ಬಳಿಯ ಪುಲಿಯೇರಿ ಗ್ರಾಮದ ಶ್ರೀ ರಾಮಕೃಷ್ಣ ಆಶ್ರಮದ ತೋಟದಲ್ಲಿ ನಡೆದ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ನಡೆದ ಪ್ರಾಕೃತಿ ವಿಕೋಪದ ಸಂದರ್ಭದಲ್ಲಿ ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮ ಸಲ್ಲಿಸಿದ ಸೇವೆ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಮುಕ್ತಿದಾನಂದಜೀ ಮಹರಾಜ್, ಪುಲಿಯೇರಿಯ ಈ ತೋಟವನ್ನು ರಾಮಕೃಷ್ಣ ಆಶ್ರಮಕ್ಕೆ ದಾನವಾಗಿ ನೀಡಿದ ಕೋಣೇರಿರ ಪಾರ್ವತಿ ಅವರ ಜ್ಞಾಪಕಾರ್ಥವಾಗಿ ಅಮ್ಮತ್ತಿಯ ಜಿಎಂಪಿ ಶಾಲೆಗೆ ಕಬ್ಬಿಣದ ಕಪಾಟನ್ನು ನೀಡಿದಲ್ಲದೆ ಕಂಪ್ಯೂಟರ್ ಮತ್ತು ಪ್ರತೀ ವರ್ಷ ಉತ್ತಮ ಅಂಕ ಪಡೆವ ವಿದ್ಯಾರ್ಥಿಗೆ ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ದೇಶಾದ್ಯಂತ ಕೆಲವು ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಕೋಟ್ಯಂತರ ರೂಪಾಯಿಗಳ ಮೌಲ್ಯದ ಆಸ್ತಿಯನ್ನು ಶ್ರೀ ರಾಮಕೃಷ್ಣ ಆಶ್ರಮದ ಸುಪರ್ದಿಗೆ ನೀಡಲು ಸಿದ್ದರಿದ್ದಾರೆ ಆದರೆ ಆಶ್ರಮ ಅದನ್ನು ಸ್ವೀಕರಿಸುವುದಿಲ್ಲ. ಸ್ವೀಕರಿಸಿದರೆ ಅದನ್ನು ಉಳಿಸಿಕೊಂಡು ಸಮಾಜ ಮುಖಿ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತದೆ ಎಂದರು.
ಕಾರ್ಯಕ್ರದಲ್ಲಿ ಆಶ್ರಮದ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿ ವಿಕೋಪ ಮತ್ತು ಕೋವಿಡ್ ದುರಂತದ ಸಂದರ್ಭದಲ್ಲಿ ಜೇನು ಸಾಕಾಣಿಕೆ ತರಬೇತಿ, ಟೈಲರಿಂಗ್ ತರಬೇತಿ ನೀಡುವ ಮುಖಾಂತರ ಸಾರ್ವಜನಿಕ ಸೇವಾಕಾರ್ಯ ಮಾಡುತ್ತಿರುವ ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಬೋದಸ್ವರೂಪಾನಂದ ಮಹರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬೋದಸ್ವರೂಪಾನಂದ ಮಹರಾಜ್, ಪ್ರಾಕೃತಿ ವಿಕೋಪದ ಸಂದರ್ಭದಲ್ಲಿ ಆಶ್ರಮದ ಕರೆಗೆ ಓಗೊಟ್ಟು ಸಹಾಯ ಹಸ್ತ ನೀಡಿದ ಆಶ್ರಮದ ಎಲ್ಲ ಭಕ್ತರು ಮತ್ತು ಅಭಿಮಾನಿಗಳಿಗೆ ವಂದನೆಗಳನ್ನು ಸಲ್ಲಿಸಿದರು.

ಅಲ್ಲದೇ ಮಡಿಕೇರಿಯ ಭಾರತೀಯ ವಿದ್ಯಾ ಭವನದ ಕಾರ್ಯದರ್ಶಿ, ಪ್ರಾಜೆಕ್ಟ್ ಕೂರ್ಗ್ ನ ಮುಖ್ಯಸ್ಥ , ಹಳೆಯ ವಿದ್ಯಾರ್ಥಿ ಬಾಲಾಜಿ ಕಶ್ಯಪ್,
ಹಳೆಯ ವಿದ್ಯಾರ್ಥಿ, ಸೈನಿಕ, ರಾಷ್ಟ ಮಟ್ಟದ ಸೋರ್ಡ್ ಆಫ್ ಹಾನರ್ ಪುರಸ್ಕೃತ ಚೋಳಂಡ ವರುಣ್ ಗಣಪತಿ, 2019-20 ರ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಹಳೆಯ ವಿದ್ಯಾರ್ಥಿ ಎಂ.ಎನ್. ವಿಹಾನ್, ಕರ್ನಾಟಕ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರು ಮತ್ತು ಅಪರ ಕಾರ್ಯದರ್ಶಿಗಳು ಇಂದನ ಇಲಾಖೆ ಮತ್ತು ಹಳೆಯ ವಿದ್ಯಾರ್ಥಿ ತೀತೀರ ಎನ್. ಅಪ್ಪಚ್ಚು ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಎಲ್ಲ ಸನ್ಮಾನಿತರು ತಮ್ಮ ಅನುಭವ ಹಂಚಿಕೊಂಡರು.

ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ವಕ್ತಾರ ಯುಕ್ತೇಶಾನಂದ ಮಹರಾಜ್, ಮಡಿಕೇರಿಯ ಕೊಡವ ಸಮಾಜದ ಅಧ್ಯಕ್ಷ ಮತ್ತು ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿ ಕೆ.ಎಸ್ ದೇವಯ್ಯ, ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಪ್ರಾಂಶುಪಾಲ ಎಸ್.ಬಿ. ಬಾಲಾಜಿ ಮತ್ತು ಹಳೆಯ ವಿದ್ಯಾರ್ಥಿ ಕೆ.ಪಿ.ಉತ್ತಪ್ಪ ಹಾಗೂ ಅದ್ಯಾಪಕರಾಗಿ 47 ವರ್ಷಗಳ ಕಾಲ ಸೇವೆ ಸಲ್ಲಿಸಿದ ಎಸ್. ಬಿ. ಸುರೇಶ್ ಮಾತನಾಡಿದರು.
ಅಮ್ಮತ್ತಿಯ ಜಿಎಂಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರತಿಮ ಕಬ್ಬಿಣದ ಕಪಾಟು ಸ್ವೀಕರಿಸಿದರು.
ಟಾಟಾ ಕಾಫಿ ಸಂಸ್ಥೆಯ ಜನರಲ್ ಮ್ಯಾನೇಜರ್ ಕಳ್ಳಿಚಂಡ ಜಿ.ರಾಜೀವ್ ತಮ್ಮ ಶಾಲಾ ದಿನಗಳ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪರಹಿತಾನಂದಜೀ ಮಹರಾಜ್, ವಿಶ್ವ ವಿದಾನಂದ ಸ್ವಾಮಿ, ಪುಣ್ಯವೃತಾನಂದ ಮಹರಾಜ್, ಶಿವಕಂತಾನಂದಜಿ, ಮಹಿಪಾಲಾನಂದಜೀ, ಗೋಪೇಂದ್ರ ನಂದಜೀ, ಶಾಂತಿವೃತಾನಂದಜೀ, ಶಿವೇಶ ಚೈತನ್ಯ, ಪ್ರಣವ ಚೈತನ್ಯ, ಪ್ರದೀಪ್ತ ಚೈತನ್ಯ, ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಅದ್ಯಾಪಕರು, ಮಡಿಕೇರಿ ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ, ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಪಾರ್ಥಸಾರಥಿ, ಅಶೋಕ್, ಅರುಣ್, ಕೂರ್ಗ್ ಡೆಂಟಲ್ ಕಾಲೇಜಿನ ಡೀನ್ ಡಾ. ಸುನಿಲ್ ಮುದ್ದಯ್ಯ, ಕೆ.ವಿ.ಕೆ ಮುಖ್ಯಸ್ಥ ಕಾಡ್ಯಮಾಡ ದೇವಯ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಚಾಲಕ ಚಕ್ಕೇರ ಮನು, ವಕೀಲ ಎಂ.ಎನ್.ನಿರಂಜನ್, ಚಿರಿಯಪಂಡ ಉಮೇಶ್, ಡಾ. ಎ.ಡಿ.ಬೆಳ್ಳಿಯಪ್ಪ, ವಕೀಲ ಬಸಪ್ಪ, ಫಾರೆಸ್ಟ್ ಕಾಲೇಜಿನ ನಿವೃತ್ತ ಡೀನ್ ಎನ್. ಎ ಪ್ರಕಾಶ್, ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ವಿರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಂದ ಉಮ್ಮತಾಟ್ ಕಾರ್ಯಕ್ರಮ ನಡೆಯಿತು.
ಹಳೆಯ ವಿದ್ಯಾರ್ಥಿ ಫಾರೆಸ್ಟ್ ಕಾಲೇಜಿನ ಡೀನ್ ಡಾ. ಸಿ.ಜಿ.ಕುಶಾಲಪ್ಪ ಸ್ವಾಗತಿಸಿದರು. ಹಳೆಯ ವಿದ್ಯಾರ್ಥಿ ಮತ್ತು ಉದ್ಯಮಿ ಚಂದನ್ ಕಾಮತ್ ನಿರೂಪಿಸಿದರು. ಹಳೆಯ ವಿದ್ಯಾರ್ಥಿ ಕೂರ್ಗ್ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ ಪೆÇನ್ನಪ್ಪ ವಂದಿಸಿದರು.