ಕೋವಿ ಚೋರರ ಬಂಧನ : ಶ್ರೀಮಂಗಲದಲ್ಲಿ ಪ್ರಕರಣ

November 29, 2020

ಮಡಿಕೇರಿ ನ.29 : ವಿರಾಜಪೇಟೆ ತಾಲ್ಲೂಕು ಹರಿಹರ ಗ್ರಾಮದ ಮನೆಯೊಂದರಲ್ಲಿ ಕೋವಿ ಕಳವು ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಶ್ರೀಮಂಗಲ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಕೋವಿಯನ್ನು ವಶಕ್ಕೆ ಪಡೆದಿದ್ದಾರೆ.
ಹರಿಹರ ಗ್ರಾಮದ ನಿವಾಸಿ ಪೂವಮ್ಮ ಎಂಬುವವರ ಮನೆಯ ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿಟ್ಟಿದ್ದ ಒಂದು ಕೋವಿಯನ್ನು ಕಳವು ಮಾಡಿ ಪರಾರಿಯಾಗಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಪಿಎಸ್‍ಐ ಹೆಚ್.ಜೆ.ಚಂದ್ರಪ್ಪ ಅವರ ನೇತೃತ್ವದ ತಂಡ ಆರೋಪಿಗಳಾದ ಕಿರಗೂರು ಗ್ರಾಮದ ಸುಮಂತ್, ಪಿರಿಯಾಪಟ್ಟಣ ತಾಲ್ಲೂಕು ನೇರಳೆಗುಪ್ಪೆ ಗ್ರಾಮದ ನಿವಾಸಿಗಳಾದ ಸುನಿಲ್ ಕುಮಾರ್, ನವೀನ್ ಹಾಗೂ ದಯಾನಂದ್ ಎಂಬುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋವಿ ಹಾಗೂ ಕೃತ್ಯಕ್ಕೆ ಬಳಸಿದ ಬೈಕನ್ನು ವಶಕ್ಕೆ ಪಡೆದಿದ್ದಾರೆ.
ಎಎಸ್‍ಐನ ಸಾಬು, ಎ.ಎಸ್.ಐ ಫ್ರಾನ್ಸಿಸ್, ಸಿಬ್ಬಂದಿಗಳಾದ ವಿಶ್ವನಾಥ, ಮನೋಹರ್, ಮನು, ರಂಜಿತ್, ಸ್ಟೀಫನ್, ಗಣೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!