Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
9:41 PM Sunday 17-October 2021

ಸೋಮವಾರಪೇಟೆ ಲಯನ್ಸ್‍ನಿಂದ ಸನ್ಮಾನ : ಅಲ್ಮೇರಾದಲ್ಲಿ ಹಣ ಚಿನ್ನ ಇಡಲೇಬೇಡಿ : ಡಿವೈಎಸ್‍ಪಿ ಶೈಲೇಂದ್ರ ಕುಮಾರ್ ಸಲಹೆ

29/11/2020

ಮಡಿಕೇರಿ ನ.29 : ನಿಮ್ಮ ಮನೆಯ ಆಲ್ಮೇರಾದಲ್ಲಿ ಯಾವಾತ್ತೂ ಬೆಲೆ ಬಾಳುವ ವಸ್ತು, ಚಿನ್ನಾಭರಣ ಮತ್ತು ಹಣವನ್ನು ಇಡಲೇಬೇಡಿ ಎಂದು ಕುಶಾಲನಗರ ಉಪ ವಿಭಾಗದ ಡಿ ವೈಎಸ್ ಪಿ ಶೈಲೇಂದ್ರ ಕುಮಾರ್ ಅವರು ಹೇಳಿದರು.
ರಾಷ್ಟ್ರಪತಿಗಳ ಪದಕ ಪಡೆದ ಹಿನ್ನೆಲೆಯಲ್ಲಿ ಸೋಮವಾರಪೇಟೆಯ ಲಯನ್ಸ್ ಸಂಸ್ಥೆ ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಮನೆಗೆ ಬರುವ ಕಳ್ಳರಿಗೆ ಸುಲಭದಲ್ಲಿ ಸಿಗುವಂತೆ ಬೆಲೆ ಬಾಳುವ ವಸ್ತುವನ್ನು ಇಡಬಾರದು ಎಂದು ಕಿವಿ ಮಾತು ಹೇಳಿದರು.
ಆಧುನೀಕತೆ ಬೆಳೆದಂತೆಲ್ಲ ಸೈಬರ್ ಅಪರಾಧಗಳೂ ಹೆಚ್ಚಾಗುತ್ತಿರುವುದಕ್ಕೆ ನಾವೇ ಕಾರಣ ಎಂದು ಹೇಳಿದ ಅವರು ಫೇಸ್ ಬುಕ್ ನಲ್ಲಿ ಕುಟುಂಬ ಸದಸ್ಯರ ಚಿತ್ರಗಳು, ಹುಟ್ಟಿದ ಹಬ್ಬದ ದಿನಾಂಕವನ್ನು ಶೇರ್ ಮಾಡುವುದು, ಪ್ರವಾಸ ತೆರಳಿದ್ದನ್ನೂ ಹಾಕುವುದರಿಂದ ಕಳ್ಳರಿಗೆ ಅನುಕೂಲವಾಗುತ್ತಿದೆ ಎಂದರು. ಸಾರ್ವಜನಿಕರ ಸಹಕಾರದಿಂದ ಮಾತ್ರ ಅಪರಾಧ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಹೇಳಿದ ಅವರು ನಾವು ಸ್ವಲ್ಪ ಜಾಗರೂಕವಾಗಿದ್ದರೂ ಅಪರಾಧಗಳನ್ನು ತಡೆಗಟ್ಟಬಹುದು. ಇಂದು ನಡೆಯುತ್ತಿರುವ ಬಹುತೇಕ ಅಪರಾಧಗಳು ನಮ್ಮ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದಲೇ ಸಂಭವಿಸುತ್ತಿದೆ ಎಂದು ಹೇಳಿದರು. ಲಯನ್ಸ್ ಜಿಲ್ಲಾ ಸಂಯೋಜಕ ಗೋವರ್ಧನ್ ಶಟ್ಟಿ ಅವರು ಮಾತನಾಡಿ ಸಮಾಜಕ್ಕೆ ನಾವು ಸಲ್ಲಿಸುವ ಸೇವೆಯೇ ಕೊನೆ ತನಕ ಉಳಿಯುತ್ತದೆ ಎಂದು ಹೇಳಿ ಸೇವೆಯೊಂದೆ ಪ್ರತಿಯೊಬ್ಬರ ಜೀವನದ ಶ್ರೇಷ್ಟ ಕಾರ್ಯ ಎಂದು ಬಣ್ಣಿಸಿದರು. 10 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 97 ಅಂಕಗಳಿಗೂ ಹೆಚ್ಚು ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಕುಮಾರಿ ಗಾನ ಮತ್ತು ಕುಮಾರಿ ಶ್ರಾವಣಿ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಅದ್ಯಕ್ಷ ಕೆ.ಎನ್.ತೇಜಸ್ವಿ ಅದ್ಯಕ್ಷತೆ ವಹಿಸಿದ್ದರು. ಪಧಾಧಿಕಾರಿಗಳಾದ ಸಿ.ಕೆ.ರೋಹಿತ್, ಕೆ.ಎಂ.ಜಗದೀಶ್, ಎಸ್.ಎನ್.ಯೋಗೇಶ್, ಉಪಸ್ಥಿತರಿದ್ದರು.