Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
4:06 AM Friday 22-October 2021

ಮಡಿಕೇರಿಯಲ್ಲಿ ಭಾವಗೀತೆ ಸ್ಪರ್ಧೆ : ಆತ್ಮಾಭಿಮಾನದ ಕೊರತೆಯಿಂದ ಕನ್ನಡಕ್ಕೆ ಕಂಟಕ : ಪ್ರತಿಮಾ ಹರೀಶ್ ರೈ ಅಭಿಪ್ರಾಯ

29/11/2020

ಮಡಿಕೇರಿ ನ.29 : ಎರಡೂವರೆ ಸಾವಿರ ವರ್ಷಗಳ ಭವ್ಯ ಇತಿಹಾಸ, ಪರಂಪರೆಯನ್ನು ಹೊಂದಿರುವ ಸುಂದರವಾದ ಕನ್ನಡ ಭಾಷೆ ಇಂದು ಅವನತಿಯ ಹಾದಿಯತ್ತ ಸಾಗಲು ನಮ್ಮ ಆತ್ಮಾಭಿಮಾನದ ಕೊರತೆಯೇ ಪ್ರಮುಖ ಕಾರಣವೆಂದು ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕ ಪ್ರತಿಮ ಹರಿಶ್ ರೈ ಅಭಿಪ್ರಾಯಪಟ್ಟಿದ್ದಾರೆ.
‘ಕನ್ನಡದ’ ಶ್ರೀಮಂತ ಸಂಸ್ಕøತಿ, ಪರಂಪರೆಯನ್ನು ಅರಿತು ಮುನ್ನಡೆಯುವುದರೊಂದಿಗೆ, ಇದು ಕನ್ನಡಿಗರೆಲ್ಲರ ಜೀವನ ಶೈಲಿಯೇ ಆಗಬೇಕಾಗಿದೆಯೆಂದು ಆಶಯ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ತೃತೀಯ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ದಿವಂಗತ ಅಬ್ದುಲ್ ಹಫೀಜ್ ಸಾಗರ್ ಜ್ಞಾಪಕಾಥರ್À ಸಾರ್ವಜನಿಕರಿಗೆ ಮುಕ್ತ ಭಾವಗೀತೆ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡಿಗರು ನಮ್ಮ ತನವನ್ನು ಬಿಟ್ಟು ಹೊರ ಹೋದರೆ ನಮ್ಮ ಅಸ್ತಿತ್ವಕ್ಕೆ ತೊಂದರೆಯುಂಟಾಗುತ್ತದೆಂದು ಅಭಿಪ್ರಾಯಿಸಿ, ಈ ನೆಲದ ಕನ್ನಡ ಭಾಷಾ ಸಂಸ್ಕøತಿಯ ಉಳಿವಿಗೆ ರೂಪುಗೊಳ್ಳುವ ‘ಭಾಷಾ ಯೋಜನೆ’ಗಳು ಸರ್ಕಾರದ ಬದಲಾವಣೆಯೊಂದಿಗೆ ಬದಲಾಗುತ್ತಾ ಸಾಗಬಾರದು. ಭಾಷಾ ಯೋಜನೆಗಳೆಂದಿಗೂ ಸರಕಾರದ ನೀತಿಯಲ್ಲವೆಂದು ಅನಿಸಿಕೆ ವ್ಯಕ್ತಪಡಿಸಿದರು.
ಮಕ್ಕಳಲ್ಲಿ ಅಭಿಮಾನ ಮೂಡಿಸಿ- ಅತ್ಯಂತ ಪ್ರಾಚೀನವಾದ ಮತ್ತು ಶ್ರೀಮಂತ ಸಂಸ್ಕ್ರತಿ ಪರಂಪರೆಯ ಕನ್ನಡದತ್ತ ಮಕ್ಕಳಲ್ಲಿ ಪ್ರೀತಿ ವಿಶ್ವಾಸಗಳನ್ನು ಮೂಡಿಸುವ ಕಾರ್ಯ ನಡೆಯಲಿ. ಈ ನಿಟ್ಟಿನಲ್ಲಿ ಮಾಧ್ಯಮಗಳು ಆಸಕ್ತವಾಗುವ ಅಗತ್ಯದತ್ತ ಪ್ರತಿಮ ಹರೀಶ್ ರೈ ಬೊಟ್ಟು ಮಾಡಿದರು.
‘ಹಿತ್ತಲ ಗಿಡ ಮದ್ದಲ್ಲ’ ಎನ್ನುವ ನಾಣ್ನುಡಿಯಂತೆ ಕನ್ನಡದೆಡೆಗೆ ಕನ್ನಡಿಗರ ನೋಟವಿದೆ. ಆದರೆ, ಇದೇ ಕನ್ನಡದತ್ತ ಅಪಾರ ಒಲವು ಹೊಂದಿದ್ದ ಜರ್ಮನ್ ವಿದ್ವಾಂಸ ರೆವರೆಂಡ್ ಫಾದರ್ ಜಾರ್ಜ್ ಫರ್ಡಿನಾಂಡ್ ಕಿಟೆಲ್ ಅವರಿಂದ ಕನ್ನಡ ಶಬ್ದ ಕೋಶ ರಚನೆಯಾಯಿತೆಂದು ಉಲ್ಲೇಖಿಸಿದ ಅವರು, ಕನ್ನಡದ ಲಿಪಿ ಇಡೀ ವಿಶ್ವದಲ್ಲೆ ಅತ್ಯಂತ ಪರಿಪೂರ್ಣವಾದ, ವೈಜ್ಞಾನಿಕವಾದ ಲಿಪಿಯಾಗಿದೆ. ಇಂತಹ ಕನ್ನಡ ಭಾಷೆಯಲ್ಲಿ ರಚಿತ ಸಾಹಿತ್ಯಕ್ಕೆ ಇತರೆ ಯಾವುದೇ ಭಾಷಾ ಸಾಹಿತ್ಯಕ್ಕೂ ಲಭ್ಯವಾಗದ 8 ಜ್ಞಾನ ಪೀಠ ಪ್ರಶಸ್ತಿ ಲಭ್ಯವಾಗಿದೆಯೆಂದು ಅಭಿಮಾನದಿಂದ ನುಡಿದರು.
ಕನ್ನಡದ ಮೊದಲ ಗ್ರಂಥ ‘ಕವಿ ರಾಜ ಮಾರ್ಗ’ ರೂಪುಗೊಳ್ಳುವ ಹಂತದಲ್ಲಿ ಇಂಗ್ಲೀಷ್ ಭಾಷೆ ಕೇವಲ ತೊಟ್ಟಿಲ ಮಗುವಾಗಿತ್ತು. ಆದರೆ, ಆ ಭಾಷೆಯನ್ನಾಡುವವರ ಅಭಿಮಾನ, ಭಾಷೆಯೆಡೆಗಿನ ತುಡಿತಗಳಿಂದ ಆ ಭಾಷೆ ಇಂದು ವಿಶ್ವ ಭಾಷೆಯಾಗಿ ಬೆಳವಣಿಗೆಯನ್ನು ಸಾಧಿಸಿದೆ. ಇದನ್ನು ಹಿನ್ನೆಲೆಯನ್ನಾಗಿರಿಸಿಕೊಂಡು ಕನ್ನಡ ಭಾಷಾ ಬೆಳವಣಿಗೆಯ ವಿಮರ್ಶೆ ಅತ್ಯವಶ್ಯವೆಂದರು.
ಕನ್ನಡ ಭಾಷಾ ಹಿನ್ನಡೆಗೆ ಇತರೆ ಭಾಷೆಗಳ ನಿಂಧನೆ ಸಲ್ಲ ಎಂದ ಪ್ರತಿಮ ಹರಿಶ್ ರೈ, ಕನ್ನಡ ಭಾಷಾ ಬೆಳವಣಿಗೆಯತ್ತ ಪ್ರತಿಯೊಬ್ಬರು ಆಸಕ್ತರಾಗುವುದರೊಂದಿಗೆ ಆಯಾ ಕಾಲ ಘಟ್ಟಕ್ಕೆ ಅನುಗುಣವಾಗಿ ಕನ್ನಡ ಸಾಹಿತ್ಯ ರಚನೆಯಾಗಬೇಕೆಂದು ತಿಳಿಸಿದರು.
ಮನು ಕುಲಕ್ಕೆ ಜೀವನ ಪಾಠ- ಕಳೆದ ಏಳೆಂಟು ತಿಂಗಳು ಇಡೀ ಮನು ಕುಲಕ್ಕೆ ಜೀವನ ಪಾಠವನ್ನು ಕಲಿಸಿದ ಅವಧಿಯೆಂದು ಕೊರೋನಾ ಸಾಂಕ್ರಾಮಿಕದ ಸಂಕಷ್ಟವನ್ನು ವಿಶ್ಲೇಷಿಸಿದ ಅವರು, ಈ ಅವಧಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ವ್ಯತಿರಿಕ್ತ ಪರಿಣಾಮ ಬೀರಿದ ಅವಧಿ. ಹೀಗಿದ್ದೂ ನವೆಂಬರ್ ತಿಂಗÀಳಿನಲ್ಲಿ ಇಂತಹ ಕನ್ನಡ ಕಾರ್ಯಕ್ರಮ ನಡೆಯುವುದಕ್ಕೆ ಅವಕಾಶ ಒದಗಿರುವುದು ಸಂತಸವನ್ನು ಉಂಟುಮಾಡಿದೆಯೆಂದು ಅಭಿಪ್ರಾಯಿಸಿದರು.
ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಮಾತನಾಡಿ, ಮನುಷ್ಯನ ಬದುಕಿನÀಲ್ಲಿ ಬಹುಪಾಲನ್ನು ಆಕ್ರಮಿಸಿಕೊಂಡಿರುವ ಭಾವನೆಗಳಿಗೆ ಎಂದಿಗೂ ಕೊನೆ ಇಲ್ಲ. ಅಂತೆಯೇ ಭಾವಗೀತೆಗಳಿಗೆ ಅಂತ್ಯವಿಲ್ಲ, ಅವುಗಳೆಂದಿಗೂ ಚಿರನೂತನವೆಂದು ಅಭಿಪ್ರಾಯಿಸಿದರು.
ನಮ್ಮೆಲ್ಲರ ಬದುಕನ್ನು ಅಕ್ಷರಶಃ ಆಳುತ್ತಿರುವ ವಿಚಾರವೇ ‘ಭಾವನೆ’. ಇಂತಹ ಭಾವನೆಗಳನ್ನು ಅಕ್ಷರ ರೂಪದಲ್ಲಿ ಸೆರೆಹಿಡಿದಿಡುವುದೇ ಭಾವಗೀತೆಗಳು ಎನಿಸಿಕೊಳ್ಳುತ್ತವೆಯೆಂದು ತಿಳಿಸಿ, ಕಲಾವಿದ ದಿ. ಅಬ್ದುಲ್ ಹಫೀಜ್ ಸಾಗರ್ ಅವರನ್ನು ಸ್ಮರಿಸಿಕೊಂಡು, ಅವರಿಗೆ ಅತ್ಯಂತ ಮೆಚ್ಚುಗೆಯ ‘ಜಾನೇ ಕಹಾ ಗಯೇವೋ ದಿನ್’ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರ ಮನ ಗೆದ್ದರು.
ಬಳಗದ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಮನುಷ್ಯತ್ವದಲ್ಲಿ ಬಿರುಕುಗಳು ಮೂಡುತ್ತಿರುವ ಈ ಸಂದಿಗ್ದ ಅವಧಿಯಲ್ಲಿ ಮನಸ್ಸುಗಳನ್ನು ಒಗ್ಗೂಡಿಸುವ ಶಕ್ತಿ ‘ಭಾವ ಗೀತೆ’ಗಳಿಗಿದೆ. ಭಾವನೆಗಳಿಂದ ತುಂಬಿದ ಭಾವಗೀತೆ ಎನ್ನುವುದು ಹೃದಯಕ್ಕೆ ತಂಪೆರೆಯುವ ತಂಗಾಳಿಯಂತೆ. ಹೃದಯದಿಂದ ಹೊರಹೊಮ್ಮುವಂತದ್ದು ಭಾವಗೀತೆಯಾಗಿದ್ದರೆ, ಮೆದುಳಿನಿಂದ ಮೂಡುವ ವಿಚಾರ ಯಾಂತ್ರಿಕವಾಗಿರುತ್ತದಷ್ಟೆ ಎಂದು ವಿಶ್ಲೇಷಿಸಿದರು.
ಈ ಬಾರಿ ಬಳಗದಿಂದ ಹಿರಿಯರು, ಕಿರಿಯರನ್ನು ಒಳಗೊಂಡಂತೆ ಸಾರ್ವಜನಿಕರಿಗೆ ಮುಕ್ತವಾಗಿ ಭಾವಗೀತೆಯನ್ನು ಆಯೋಜಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಹಿರಿಯರಿಂದ ಕೇಳಿ, ನೋಡಿ ಕಲಿಯುವಂತಾಗಲಿ ಎನ್ನುವ ಆಶಯ ತಮ್ಮದಾಗಿದೆಯೆಂದು ತಿಳಿಸಿದರು.
ಶ್ರದ್ಧಾಂಜಲಿ- ಕಲಾವಿದ ದಿ. ಅಬ್ದುಲ್ ಹಫೀಜ್ ಸಾಗರ್ ಅವರಿಗೆ ಸಭೆಯ ಆರಂಭದಲ್ಲಿ ಮೌನಾಚರಣೆಯ ಮೂಲಕ ಗೌರವವನ್ನು ಸಲ್ಲಿಸಲಾಯಿತು.
ವೇದಿಕೆಯಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನು ಶೆಣೈ ಉಪಸ್ಥಿತರಿದ್ದರು.ಲಹರಿ ತಂಡದ ನಾಡಗೀತೆ ಮತ್ತು ರೈತಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ ಸ್ವಾಗತಿಸಿ, ಬಳಗದ ನಿರ್ದೇಶಕರಾದ ಎಸ್.ಐ. ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಬಳಗದ ನಿರ್ದೇಶಕರಾದ ಉಮೇಶ್ ಕೆ.ವಿ. ಮುಖ್ಯ ಭಾಷಣಕಾರರನ್ನು ಪರಿಚಯಿಸಿದರು. ನಿರ್ದೇಶಕ ಪ್ರೇಂ ಕುಮಾರ್ ಟಿ.ಜಿ. ವಂದಿಸಿದರು.
ಭಾವಗೀತೆ – ಕಲಾವಿದ ದಿ. ಅಬ್ದುಲ್ ಹಫೀಜ್ ಸಾಗರ್ ಜ್ಞಾಪಕಾರ್ಥ ಆಯೋಜಿತ ಭಾವಗೀತೆ ಸ್ಪರ್ಧೆಯಲ್ಲಿ 25 ಮಂದಿ ಸ್ಪರ್ಧಿಗಳು ಪಾಲ್ಗೊಂಡು, ನಾಡಿನ ಖ್ಯಾತÀ ಸಾಹಿತಿಗಳ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಪ್ರೇಕ್ಷಕರ ಮನಗೆದ್ದರು.