ಕೂತಿನಾಡು ಶ್ರೀಸಬ್ಬಮ್ಮ ದೇವರ ಸುಗ್ಗಿಯ ಎಮ್ಮೆ ಸುಗ್ಗಿ ಉತ್ಸವಕ್ಕೆ ಚಾಲನೆ

29/11/2020

ಮಡಿಕೇರಿ ನ.29 : ಸೋಮವಾರಪೇಟೆ ಸಮೀಪದ ನಗರಳ್ಳಿಯಲ್ಲಿ ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸುಗ್ಗಿಯ ಎಮ್ಮೆ ಸುಗ್ಗಿ ಉತ್ಸವ ಭಾನುವಾರ ಎಮ್ಮೆಗೆ ಹೊನ್ನು(ಕಾಣಿಕೆ) ಕಟ್ಟುವ ಮೂಲಕ ಸಾಂಪ್ರದಾಯಿಕ ಪೂಜೆಯೊಂದಿಗೆ ಚಾಲನೆ ದೊರೆಯಿತು.
ಸೋಮವಾರಪೇಟೆ ಹಾಗೂ ಸಕಲೇಶಪುರ ತಾಲ್ಲೂಕಿನ ಒಟ್ಟು18 ಗ್ರಾಮಗಳು ಒಂದೆಡೆ ಸೇರಿ ನಡೆಸುವ ಸುಗ್ಗಿ ಉತ್ಸವದಲ್ಲಿ ಪ್ರತಿ 12 ವರ್ಷಕೊಮ್ಮೆ ಎಮ್ಮೆ ಸುಗ್ಗಿ ನಡೆಯಲಿದ್ದು ಅದರಂತೆ ಹಿಂದಿನ ಪದ್ಧತಿಯಂತೆ ದೇವರ ಒಡೆಕಾರರು ಸಬ್ಬಮ್ಮ ದೇವರಿಗೆ ಪೂಜೆ ಸಲ್ಲಿಸಿ. ನಂತರ ಎಮ್ಮೆ ಮತ್ತು ಕೋಣ ತರಲು ಕೂತಿ ಗ್ರಾಮದ ಬಂಗಿರ ಮನೆ ಕುಟುಂಬದಿಂದ ಕರಿ ಕಂಬಳಿಯನ್ನು ತಂದಿಟ್ಟು ಸಾಂಪ್ರದಾಯಿಕ ಪೂಜೆಯೊಂದಿಗೆ ಹೊನ್ನು(ಕಾಣಿಕೆ) ಸ್ವೀಕರಿಸಲಾಯಿತು.
ಭಾನುವಾರದಿಂದ ಡಿಸೆಂಬರ್ 27ರ ವರೆಗೆ ಸುಗ್ಗಿ ಉತ್ಸವಕ್ಕೆ ಸೇರಿದ 18 ಗ್ರಾಮಗಳಿಗೆ ಕಟ್ಟು ಬಿದ್ದಿದ್ದು. ನೆಂಟರಿಷ್ಟರ ಮನೆ,ಹೋಟೆಲುಗಳಲ್ಲಿ ಊಟ ಮಾಡುವಂತಿಲ್ಲ ಹಾಗೂ ಹೊರಗೆ ಬೇಯಿಸಿದ ತಿಂಡಿ ತಿನಿಸುಗಳನ್ನು, ಕಾಫಿ,ಟಿ ಕುಡಿಯಬಾರದೆಂಬ ನಿಯಮವಿದ್ದು, ಅದರಂತೆ ದೇವರ ಬಿಲ್ಲು ಒಪ್ಪಿದ ಮೇಲೆ ಸುಗ್ಗಿ ಉತ್ಸವಕ್ಕೆ ಸೇರಿದ 18 ಗ್ರಾಮಗಳಲ್ಲಿ ಮದುವೆಗೆ ಹಸೆಮಣೆ ಶಾಸ್ತ್ರ ಮಾಡುವಂತಿಲ್ಲ, ಹಾಗೂ ಮನೆ ಬಾಗಿಲಿನಲ್ಲಿ,ಗ್ರಾಮದಲ್ಲಿ 2023ನೇ ಏಪ್ರಿಲ್ ಲ್ಲಿ ಬಿಲ್ ಬರುವವರೆಗೆ ಧಾರಾ ಮುಹೂರ್ತ ಅಂದರೆ ಎಮ್ಮೆಗೆ ಹೊನ್ನು ಕಟ್ಟಿದ ನಂತರ ಡಿ.27ರ ಒಳಗೆ 18 ಗ್ರಾಮಸ್ಥರು ಮದುವೆ,ಗೃಹಪ್ರವೇಶ ಮಾಡಬಾರದೆಂದು ಸಂಪ್ರದಾಯವಿದೆ.
ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಸಮಿತಿಯ ಅಧ್ಯಕ್ಷÀ ಕೆ.ಟಿ.ಜೋಯಪ್ಪ, ಪ್ರಕಾಶ್, ಯು.ಕೆ.ಸೋಮಶೇಖರ್, ದಿನೇಶ್, ರೇವಣ್ಣ, ಬಂಗಿರ ಗಣೇಶ್ ಸೇರಿದಂತೆ 18 ಗ್ರಾಮದ ಗ್ರಾಮಸ್ಥರು ಹಾಜರಿದ್ದರು.