ಮಡಿಕೇರಿ ಕಸದ ಸಮಸ್ಯೆ : ಸ್ಟೋನ್ ಹಿಲ್ ಘಟಕಕ್ಕೆ ಪೌರಾಡಳಿತ ಸಚಿವರ ಭೇಟಿ ಪರಿಶೀಲನೆ

ಮಡಿಕೇರಿ ನ.29 : ಪೌರಾಡಳಿತ ಸಚಿವರಾದ ಡಾ. ನಾರಾಯಣ ಗೌಡ ಅವರು ಭಾನುವಾರ ನಗರದ ಸ್ಟೋನ್ ಹಿಲ್ ಬಳಿ ಇರುವ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಸಚಿವರು ಮಡಿಕೇರಿ ನಗರವನ್ನು ಸ್ವಚ್ಚ ಹಾಗೂ ಸುಂದರ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
ಕಸ ವಿಲೇವಾರಿಗೆ 25 ಎಕರೆ ಜಾಗ ಗುರುತಿಸಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಲಾಗುವುದು . ಈಗಾಗಲೇ 5 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದ್ದು, ನಗರವನ್ನು ಪೈಲೆಟ್ ಯೋಜನಾ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕಿದೆ. ಆ ದಿಸೆಯಲ್ಲಿ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ನಗರದ ಕಸ ವಿಲೇವಾರಿಗೆ ಶಾಶ್ವತ ಕಾಯಕಲ್ಪ ಕಲ್ಪಿಸಬೇಕಿದೆ. ಈ ಘಟಕವನ್ನು ಸ್ಥಳಾಂತರಿಸಬೇಕಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ಪೌರಾಯುಕ್ತರಾದ ಎಸ್.ವಿ.ರಾಮದಾಸ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕರಾದ ರಾಜು, ಇಇ ಶಿವಾನಂದ, ಎಇಇ ರಾಜೇಂದ್ರ, ಎಇ ವನಿತಾ ಮತ್ತಿತರರು ಹಾಜರಿದ್ದರು.