ಕೃಷಿ ಕಾಯ್ದೆ ಸಮರ್ಥಿಸಿಕೊಂಡ ಮೋದಿ

30/11/2020

ನವದೆಹಲಿ ನ.30 : ಅತ್ತ ದೆಹಲಿ ಗಡಿಯಲ್ಲಿ ರೈತರ ವ್ಯಾಪಕ ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ಮನ್ ಕಿ ಬಾತ್ ಈ ವಿಚಾರದ ಕುರಿತು ಪರೋಕ್ಷವಾಗಿ ಮಾತನಾಡಿರುವ ಪ್ರಧಾನಿ ಮೋದಿ ತಮ್ಮ ಸರ್ಕಾರದ ಕೃಷಿ ಕಾನೂನು ಸಮರ್ಥಿಸಿಕೊಂಡಿದ್ದಾರೆ.
ಇಂದು ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನಿನ ಮೂಲಕ ರೈತರಿಗೆ ಹೊಸ ಹಕ್ಕು, ಅವಕಾಶಗಳು ದೊರೆತಿವೆ. ಸಂಸತ್ತು ಇತ್ತೀಚೆಗೆ ಕಠಿಣ ಸುಧಾರಣೆಯ ನಂತರ ಕೃಷಿ ಸುಧಾರಣಾ ಕಾನೂನುಗಳನ್ನು ಜಾರಿಗೆ ತಂದಿದೆ. ಈ ಸುಧಾರಣೆಗಳು ರೈತರ ಸಂಕೋಲೆಗಳನ್ನು ಮುರಿದುಬಿಟ್ಟಿದೆ. ಮಾತ್ರವಲ್ಲದೆ ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಿವೆ ಎಂದು ಹೇಳಿದರು.
‘ಇತ್ತೀಚಿನ ಕೃಷಿ ಸುಧಾರಣೆಗಳು ರೈತರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿವೆ. ಅನೇಕ ರಾಜಕೀಯ ಪಕ್ಷಗಳು ಭರವಸೆ ನೀಡಿದ ರೈತರ ದಶಕಗಳ ಹಳೆಯ ಬೇಡಿಕೆಗಳನ್ನು ಈಗ ಈಡೇರಿಸಲಾಗಿದೆ. ಸಂಸತ್ತು ಇತ್ತೀಚೆಗೆ ಕಠಿಣ ಸುಧಾರಣೆಯ ನಂತರ ಕೃಷಿ ಸುಧಾರಣಾ ಕಾನೂನುಗಳನ್ನು ಜಾರಿಗೆ ತಂದಿದೆ. ಈ ಸುಧಾರಣೆಗಳು ರೈತರ ಸಂಕೋಲೆಗಳನ್ನು ಮುರಿದಿರುವುದು ಮಾತ್ರವಲ್ಲದೆ ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಿವೆ. ಈ ಕಾನೂನಿನ ಪ್ರಕಾರ, ಉತ್ಪನ್ನಗಳನ್ನು ಖರೀದಿಸಿದ ಮೂರು ದಿನಗಳಲ್ಲಿ ರೈತರಿಗೆ ಪಾವತಿಸುವುದು ಕಡ್ಡಾಯವಾಗಿದೆ. ಪಾವತಿ ಮಾಡದಿದ್ದರೆ, ರೈತ ದೂರು ನೀಡಬಹುದು. ಮತ್ತೊಂದು ಪ್ರಮುಖ ನಿಬಂಧನೆಯೆಂದರೆ ಪ್ರದೇಶದ ಎಸ್‍ಡಿಎಂ (ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್) ಅಧಿಕಾರಿಗಳು ಒಂದು ತಿಂಗಳಲ್ಲಿ ರೈತನ ದೂರನ್ನು ಪರಿಹರಿಸಬೇಕು ಎಂದು ಹೇಳಿದರು.