ಭಾರತದ ವಿರುದ್ಧ ಆಸ್ಟ್ರೇಲಿಯಾಕ್ಕೆ ಗೆಲುವು

November 30, 2020

ಸಿಡ್ನಿ ನ.30 : ಸಿಡ್ನಿಯಲ್ಲಿ ನಡೆಯುತ್ತಿರುವ 2 ನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ 51 ರನ್ ಗಳ ಗೆಲುವು ದಾಖಲಿಸಿದ್ದು, ಸತತ ಎರಡು ಗೆಲುವಿನ ಮೂಲಕ ಸರಣಿಯಲ್ಲಿ ಆಸೀಸ್ 2-0 ಅಂತರದ ಗೆಲುವು ದಾಖಲಿಸಿದೆ.
ಆಸ್ಟ್ರೇಲಿಯಾ ನೀಡಿದ 390 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತದ ಪ್ರಾರಂಭಿಕ ಆಟಗಾರರು ಸ್ಫೋಟಕ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಕಂಡುಕೊಂಡಿತಾದರೂ
ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಝಲ್ವುಡ್ ನ ಬೌಲಿಂಗ್ ದಾಳಿಗೆ ಶಿಖರ್ ಧವನ್ (30) ಮಯಾಂಕ್ ಅಗರ್ವಾಲ್ (28) ರನ್ ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರು. ಕೆಎಲ್ ರಾಹುಲ್-ಕೊಹ್ಲಿ(89) ಅವರ 93 ರನ್ ಗಳ ಅದ್ಭುತ ಜೊತೆಯಾಟ ಭಾರತದ ಗೆಲುವಿನ ಆಸೆಯನ್ನು ಚಿಗುರಿಸಿತ್ತು. ಆದರೆ ಈ ಜೊತೆಯಾಟವೂ ಸಹ ಹೆಚ್ಚು ಕಾಲ ಆಸೀಸ್ ಬೌಲಿಂಗ್ ನ್ನು ಎದುರಿಸಲು ವಿಫಲವಾಯಿತು.
ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಪರ ಸತತ ಎರಡನೇ ಬಾರಿಗೂ ಸ್ಟಾರ್ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದು 64 ಎಸೆತಗಳಲ್ಲಿ 104 ರನ್ ಗಳನ್ನು ಗಳಿಸುವ ಮೂಲಕ ಬೃಹತ್ ರನ್ ಗಳಿಸಲು ತಂಡಕ್ಕೆ ನೆರವಾದರು. ಸ್ಮಿತ್ ಜೊತೆಗೆ ಡೇವಿಡ್ ವಾರ್ನರ್ (77 ಎಸೆತಗಳಲ್ಲಿ 83 ರನ್) ಗ್ಲೆನ್ ಮ್ಯಾಕ್ಸ್ವೆಲ್ (29 ಎಸೆತಗಳಲ್ಲಿ 63 ರನ್) ಗಳಿಸಿ ತಂಡಕ್ಕೆ ನೆರವಾದರು.

error: Content is protected !!