ಸಿಎನ್‍ಸಿ ಯಿಂದ ಅರ್ಥಪೂರ್ಣವಾಗಿ ಜರುಗಿದ ಪುತ್ತರಿ ನಮ್ಮೆ

30/11/2020

ಮಡಿಕೇರಿ ನ. 30 : ಕೊಡಗಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಪುತ್ತರಿ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 27ನೇ ಸಾರ್ವತ್ರಿಕ ಪುತ್ತರಿ ನಮ್ಮೆಯನ್ನು ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಿ.ಎನ್.ಸಿ. ಮುಖ್ಯಸ್ಥ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಕೊಡವರ ಸಂಪ್ರಾದಾಯಿಕ ಉಡುಗೆ ತೊಡುಗೆ ಧರಿಸಿ ಗ್ರಾಮದ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭ ಸಿ.ಎನ್.ಸಿ ಮುಖ್ಯಸ್ಥ ಎನ್.ಯು.ನಾಚಪ್ಪ ನಾಡಿನ ಜನತೆಗೆ ಪುತ್ತರಿ ಹಬ್ಬದ ಶುಭಾಶಯವನ್ನು ತಿಳಿಸಿದರು. ಈ ನಾಡಿಗೆ ಮತ್ತು ಜನತೆಗೆ ಶಾಂತಿ, ನೆಮ್ಮದಿ, ಮತ್ತು ಐಶ್ವರ್ಯ ಹಾಗೂ ಸಂಮೃದ್ಧಿ ಒದಗಲಿ ಎಂದು ಹಾರೈಸಿದರು.

ಈ ಸಂದರ್ಭ ಜಾನಪದ ತಜ್ಞ ಡಾ.ಹನಿಯೂರು ಚಂದ್ರೇಗೌಡ, ಸಿಎನ್‍ಸಿ ಪ್ರಮುಖರಾದ ನಂದಿನೆರವಂಡ ಉತ್ತಪ್ಪ, ಪಾರ್ವತಿ ನಾಚಪ್ಪ, ವಿಜು, ನಿಶಾ, ಅಪ್ಪಯ್ಯ, ಅಯ್ಯಣ್ಣ, ಬೀನಾ ಅಯ್ಯಣ್ಣ, ಕೀರ್ತನ್ ತಿಮ್ಮಯ್ಯ, ರೂಪಾ, ಮುತ್ತಣ್ಣ, ಪೊನ್ನಪ್ಪ, ಕೃಪಾ, ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಚೆಂಬಂಡ ಜನತ್, ಪುಲೇರ ಕಾಳಪ್ಪ, ಸ್ವಾತಿ, ರವೀನ, ಶಿವಾನಿ, ಪೊನ್ನಣ್ಣ, ಹರ್ಷ, ಅಯಿಲಪಂಡ ಮಿಟ್ಟು, ರಂಜು, ಚಂಡೀರ ರಾಜು ತಿಮ್ಮಯ್ಯ, ಮನೋಜ್, ಹಂಚೆಟ್ಟಿರ ಪೊನ್ನಪ್ಪ, ಶಾಂತಿ, ಮಂದಪಂಡ ದೇಚಮ್ಮ, ಮಣವಟ್ಟಿರ ಮೋಟಯ್ಯ, ಮುತ್ತಕ್ಕಿ, ನಾಪಂಡ ರೋಷನ್, ಪೊನ್ನೇಟ್ ಗಣೇಶ್, ಮನು ಮತ್ತಿತರರು ಇದ್ದರು.