ಸುಂಟಿಕೊಪ್ಪ WORKSHOP ಮಾಲೀಕರ ಸಂಘದಿಂದ ಆರ್ಥಿಕ ನೆರವು

30/11/2020

ಸುಂಟಿಕೊಪ್ಪ,ನ30: ವರ್ಕ್‍ಶಾಪ್ ಮಾಲೀಕರ ಸಂಘದ ಸದಸ್ಯ ಕೆ.ಸತೀಶ್ ಅನಾರೋಗ್ಯ ಗೊಂಡಿದ್ದು, ಅವರ ಚಿಕಿತ್ಸೆಗೆ ಸಂಘದ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಮತ್ತು ಪದಾಧಿಕಾರಿಗಳು ಧನ ಸಹಾಯವನ್ನು ನೀಡಿದರು.
ವರ್ಕ್‍ಶಾಪ್ ಮಾಲೀಕರ ಸಂಘದ ಸಹಕಾರ್ಯದರ್ಶಿ ಕೆ.ಸತೀಶ್ ಅವರು ಇತ್ತೀಚೆಗೆ ಅನಾರೋಗ್ಯಗೊಂಡಿದ್ದು, ಅವರು ಕೇರಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರುನ್ನು ವರ್ಕ್‍ಶಾಪ್ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಅವರಿಗೆ ಧೈರ್ಯ ತುಂಬಿ ಚಿಕಿತ್ಸೆಯ ವೆಚ್ಚಕ್ಕಾಗಿ ರೂ 10,000 ಧನ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ಗೌರವಧ್ಯಕ್ಷರುಗಳಾದ ವಿ.ಎ.ಸಂತೋಷ್,ಕೆ.ಪಿ.ವಿನೋದ್, ಪಿ.ಆರ್.ಸುಕುಮಾರ್,ಖಜಾಂಜಿಆರ್.ಸತೀಶ್, ಸಮಿತಿ ಸದಸ್ಯರುಗಳಾದ ಬಿ.ಎಸ್.ರಮೇಶ್, ಕೆ.ಜಿ.ಸತೀಶ್, ತಂಗವೇಲು ಮತ್ತಿತರರು ಇದ್ದರು.
ಇದೇ ಸಂದರ್ಭ ಸಂಘದ ಅಧ್ಯಕ್ಷರಾದ ಪಿ.ಆರ್.ಸುನಿಲ್‍ಕುಮಾರ್ ಮಾತನಾಡಿ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ನಮ್ಮ ಸಂಘಕ್ಕೆ ಒಳಪಟ್ಟ ವರ್ಕ್‍ಶಾಫ್‍ಗಳಲ್ಲಿ 16 ವರ್ಷ ಮೇಲ್ಪಟ್ಟ ಯುವಕರಿಗೆ ಮುಂದಿನ ಭವಿಷ್ಯದ ದಿಸೆಯಲ್ಲಿ ವಾಹನಗಳ ದುರಸ್ತಿ ಕಾರ್ಯಗಳ ಬಗ್ಗೆ ಉಚಿತವಾಗಿ ತರಭೇತಿಯನ್ನು ನೀಡಲಾಗುವುದು. ಕೆಲಸಕ್ಕೆ ಸೇರ್ಪಡೆಗೊಳ್ಳುವ ಯುವಕರಿಗೆ ಗೌರವಧನ ನೀಡಲಾಗುವುದು. ಆಸಕ್ತಿ ಇರುವವರು ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ಭೇಟಿ ಮಾಡುವಂತೆ ತಿಳಿಸಿದ್ದಾರೆ.