ಡಿ.7 ರಂದು ಮಡಿಕೇರಿಯಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ

30/11/2020

ಮಡಿಕೇರಿ ನ.30 : ಮಡಿಕೇರಿ ನಗರದ ಯುದ್ಧ ಸ್ಮಾರಕದ (ಸನ್ನಿಸೈಡ್) ಆವರಣದಲ್ಲಿ ಡಿ.7 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸರಳವಾಗಿ ನಡೆಯಲಿದೆ ಎಂದು ಸೈನಿಕ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.