ಕರುನಾಡ ಸೇವಕರು ಕನ್ನಡ ಸಂಘ ದಿಂದ ರಫೀಕಲಿ ಗೆ ಹೆಮ್ಮೆಯ ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ

01/12/2020

ಮಡಿಕೇರಿ ಡಿ. 1 :ದುಬೈಯಲ್ಲಿ ರಫೀಕಲಿ ಕುಂಡಂಡ ಕುಂಜಿಲ ಅವರ ಕನ್ನಡಪರ ಕೆಲಸ ಮತ್ತು ಕೋವಿಡ್ ಕಾಲದ ಸೇವೆ ಗುರುತಿಸಿ ಬೆಂಗಳೂರಿನ ಕರುನಾಡ ಸೇವಕರು ಕನ್ನಡ ಸಂಘ ಆಯೋಜಿಸಿದ ಕನ್ನಡ ರಾಜ್ಯೋತ್ಸವ ವೇದಿಕೆಯಲ್ಲಿ ರಫೀಕಲಿ ಅಣ್ಣ ಸೂಫಿ ಕುಂಡಂಡ ಅವರು ರಫೀಕಲಿ ಅವರ ಪರವಾಗಿ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಹಾಗೂ ಸನ್ಮಾನ ಸ್ವೀಕರಿಸದರು.
ಕರುನಾಡ ಸೇವಕರು ಅಧ್ಯಕ್ಷರಾದ ಲೋಕೇಶ್ ಗೌಡ ಅಣ್ಣ ಮಂಡ್ಯ , ಪ್ರಧಾನ ಕಾರ್ಯದರ್ಶಿ ಮಾದೇಶ್ ಗೌಡ ಅಣ್ಣ ಅವರಿಗೆ ಹಾಗೂ ಇಡೀ ಕರುನಾಡ ಸೇವಕರು ತಂಡಕ್ಕೆ ನನ್ನ ಅಳಿಲು ಸೇವೆಯನ್ನು ಗುರುತಿಸಿದ್ದಕ್ಕೆ, ರಫೀಕಲಿ‌ ಕುಂಡಂಡ ಧನ್ಯವಾದಗಳನ್ನ ತಿಳಿಸಿದರು.