ಕಾಟಕೇರಿಯಲ್ಲಿ ಹುತ್ತರಿ ಸಂಭ್ರಮ

01/12/2020

ಮಡಿಕೇರಿ ಡಿ. 1 : ಕೊಡಗಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಹುತ್ತರಿ ಹಬ್ಬವನ್ನು ಕಾಟಕೇರಿಯ ಕೂರನಬಾಣೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮದ ಕೊಂಬನ ದಯಾನಂದ ಹಾಗೂ ಪ್ರಮೀಳಾ ದಂಪತಿಯ ಭತ್ತದ ಗದ್ದೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.