ಶಿರಸಿಯ ಪ್ರಸಿದ್ಧ ಪ್ರೇಕ್ಷಣೆಯ ಸ್ಥಳ ಸಹಸ್ರಲಿಂಗ

December 1, 2020

ಶಿರಸಿ ಹಲವು ವಿಶೇಷತೆಯನ್ನು ಹೊಂದಿದೆ ಹಾಗು ರಮಣೀಯ ವಾತಾವರಣ ಪ್ರಕೃತಿಯ ಸೊಬಗನ್ನು ಹೊಂದಿದೆ. ಈ ಊರಿನ ವಿಶೇಷತೆ ಏನೆಂದರೆ ಈ ಊರಿನ ಸನಿಹ ಇರುವ ಕೆಲವು ರಮಣೀಯ ಸ್ಥಳಗಳು ಯಾಣ, ಬನವಾಸಿ, ಸೊಂದಾ ಮಠ, ಸೊದೆ (ವಾದಿರಾಜ ಮಠ), ಸಹಸ್ರಲಿ೦ಗ, ಮೋರೆಗಾರ ಜಲಪಾತ, ಕುಮುಟಾಯಿಂದ ಶಿರಸಿಗೆ ಹೊಗುವ ದಾರಿಯಲ್ಲಿ ಸಿಗುವ ದೇವಿಮನೆ ಘಟ್ಟ ನೊಡಲು ಬಹಳ ಆಕರ್ಷಣೀಯ ವಾಗಿದೆ. ಇದು ಕಾಡಿನಿ೦ದ ಆವರಿಸಲ್ಪಟ್ಟಿದೆ.

ಇಲ್ಲಿಯ ಸುತ್ತ ಮುತ್ತ ಹಳ್ಳಿಗಳ ಜನ ಅಡಿಕೆ ಬೆಳೆಗಾರರು. ತೆ೦ಗು, ಭತ್ತ, ವೆನಿಲ್ಲಾ, ಕೋಕಾಗಳನ್ನೂ ಸಹ ಇಲ್ಲಿ ಬೆಳೆಯುತ್ತಾರೆ. ಶಿರಸಿಯ ಮಾರಿಕಾಂಬಾ ದೇಗುಲವು ಬಹಳ ಪ್ರಸಿದ್ಧಿಯಾಗಿದೆ. ಸಿರಸಿ ಸಮುದ್ರ ಮಟ್ಟದಿಂದ ೫೯೦ ಮೀಟರ್ ಎತ್ತರದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿಯ ಮಧ್ಯದಲ್ಲಿದೆ. ಇದು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ೪೨೫ ಕಿ.ಮಿ. ದೂರದಲ್ಲಿದೆ.

ಶಿರಸಿಯ ಪ್ರಸಿದ್ಧ ಪ್ರೇಕ್ಷಣೆಯ ಸ್ಥಳವಾದ ಸಹಸ್ರಲಿಂಗದ ಬಗ್ಗೆ ತಿಳಿಯೋಣ ಬನ್ನಿ.
ಸಹಸ್ರ ಲಿಂಗವು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಶಿರಸಿಯಿಂದ ಸುಮಾರು 12 ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ 0.5 ಕಿ.ಮೀ ದೂರದಲ್ಲಿದೆ. ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ. ಆಗಾಗಿ ಇದಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ.

ಈ ಪ್ರವಾಸಿ ತಾಣವು ಸೋಂದಾ ಮತ್ತು ಸ್ವರ್ಣವಲ್ಲಿ ಮಠಗಳಿಗೆ ತುಂಬಾ ಹತ್ತಿರದಲ್ಲಿದೆ. ಈ ಸಹಸ್ರ ಲಿಂಗಳನ್ನು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಎಂದು ಹೇಳುತ್ತಾರೆ, ಕೆಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೂ ಕಾಣುತ್ತದೆ. ಶಿರಸಿ-ಯಲ್ಲಾಪುರ ನಡುವಿನ ರಸ್ತೆಯಲ್ಲಿ ಈ ಪ್ರದೇಶವಿದ್ದು , ಶಾಲ್ಮಲಾ ನದಿಯ ಒಟ್ಟು ಜಾಗವನ್ನು ಸಂರಕ್ಷಿತ ಪ್ರದೇಶವೆಂದು ಹೇಳಾಗುತ್ತದೆ.

ಈ ಸಹಸ್ರ ಲಿಂಗದ ಹಿನ್ನಲೆ ಏನು: ಶಿರಸಿ ಪ್ರದೇಶದಲ್ಲಿ ಹಿಂದೆ 1678-1718 ರ ಸಮಯದಲ್ಲಿ ಆಳುತ್ತಿದ್ದ ಸದಾಶಿವರಾಯ ಅರಸನು ಈ ಶಿವಲಿಂಗಗಳ ನಿರ್ಮಾತೃ ಎನ್ನಲಾಗಿದೆ. ಶಿವನ ಪರಮ ಭಕ್ತನಾಗಿದ್ದ ಇತ ಇಲ್ಲಿ ಹರಿದಿರುವ ಶಲ್ಮಲಾ ನದಿಯ ತಟದ ಕಲ್ಲುಗಳ ಮೇಲೆ, ನೀರೊಳಗಿನ ಕಲ್ಲುಗಳ ಮೇಲೆ ಹೀಗೆ ಎಲ್ಲೆಂದರಲ್ಲಿ ಶಿವಲಿಂಗಗಳನ್ನು ಕೆತ್ತಿಸಿದ್ದಾನೆ ಅನ್ನೋದು ಹಿರಿಯರ ಮಾತು..

ಈ ಸ್ಥಳಕ್ಕೆ ಪ್ರವಾಸಕೆಂದು ಬರುವವರು ಊಟವನ್ನು ತಂದು ಕುಟುಂಬ ಸಮೇತ ಈ ಪ್ರಕೃತಿಯ ಮಡಿಲಲ್ಲಿ ಸವಿದು ಹೋಗಬಹುದು, ಆಗೆಯೇ ಸ್ವಚ್ಛತೆ ಕಾಪಾಡುವುದು ತುಂಬಾನೇ ಮುಖ್ಯ ಸಾವಿರಾರು ಪ್ರವಾಸಿಗರು ಈ ಸ್ಥಳಕ್ಕೆ ಬರುತ್ತಿರುತ್ತಾರೆ.

error: Content is protected !!