ಭಾರತದ ಮಹಿಳೆಯರು ಏಕೆ ಬಳೆ ಧರಿಸುತ್ತಾರೆ ?

01/12/2020

ಮುಂಗೈನ ಭಾಗ ಸಾಮಾನ್ಯವಾಗಿ ಮಾನವನ ಎಲ್ಲಾ ಚಟುವಟಿಕೆಳಿಗು ಆಧಾರವಾಗಿದೆ. ಅಲ್ಲದೆ ನಾಡಿಮಿಡಿತದ ಬಡಿತ ದೇಹದ ಎಲ್ಲಾ ಭಾಗಗಳಲ್ಲಿಯೂ ಕ್ರಮವಾಗಿದೆಯೇ ಎಂಬುಬುದನ್ನು ಸೂಚಿಸುತ್ತದೆ. ಮಹಿಳೆಯರು ಈ ಮುಂಗೈನಲ್ಲಿ ಬಳೆ ಧರಿಸುವುದರಿಂದ ರಕ್ತ ಪರಿಚಲನೆಯ ಒತ್ತಡದ ಮೂಲಕ ಕ್ರಮಪಡಿಸುತ್ತದೆ. ಜೊತೆಗೆ ದೇಹದಲ್ಲಿನ ವಿದ್ಯುತ್ ಚರ್ಮದ ಮೂಲಕ ಪ್ರವಹಿಸುತ್ತಿದ್ದು, ಅದು ಹೊರ ಹೋಗದಂತೆ ವೃತ್ತಾಕಾರದ ಬಳೆ ತಡೆದು ದೇಹದ ಆರೋಗ್ಯಕ್ಕೆ ಪೂರಿತವಾಗುತ್ತದೆ.

ಕೈತುಂಬಾ ಬಳೆ, ಹಣೆಯಲ್ಲಿ ಸಿಂಧೂರ, ತಲೆಯಲ್ಲಿ ಹೂವು, ಕೆನ್ನೆಯಲ್ಲಿ ಅರಿಶಿನ, ಕಾಲಲ್ಲಿ ಕಾಲುಂಗುರವನ್ನು ಧರಿಸುವುದು ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಸುಮಂಗಳೆಯರ ಲಕ್ಷಣ ಎಂದು ಹೇಳಲಾಗುವುದು. ಮಂಗಳ ಕಾರ್ಯವನ್ನು ಮಾಡುವಾಗ ಸುಮಂಗಲಿಯರು ಕಡ್ಡಾಯವಾಗಿ ಈ ರೀತಿಯ ಅಲಂಕಾರವನ್ನು ಮಾಡಿಕೊಳ್ಳಬೇಕು. ಆಗಲೇ ದೇವತೆಗಳ ಆಶೀರ್ವಾದ ದೊರೆಯುವುದು ಎಂದು ಹೇಳಲಾಗುವುದು. ಮಹಿಳೆಯರು ಧರಿಸುವ ಬಳೆ, ಕಾಲುಂಗುರ, ಕಿವಿಯೋಲೆ, ಉಂಗುರ, ಸಿಂಧೂರ ಇಡುವುದು ಎಲ್ಲವೂ ವೈಜ್ಞಾನಿಕ ಹಿನ್ನೆಲೆಯನ್ನು ಪಡೆದುಕೊಂಡಿದೆ.

ಮಹಿಳೆಯರು ಧರಿಸುವ ಬಳೆಯು ಸಾಕಷ್ಟು ಕಥೆ ಹಾಗೂ ಕವನವನ್ನು ರಚಿಸಿರುವುದನ್ನು ಕಾಣಬಹುದು. ಮನೆಯಲ್ಲಿ ಬಳೆಗಳ ಶಬ್ದ ಮಾಡುವ ಕೈಗಳಿರಬೇಕು. ಆಗಲೇ ಮನೆಯು ಸಮೃದ್ಧ ತೆಯಿಂದ ಕೂಡಿರುತ್ತದೆ ಎಂದು ಸಹ ಹೇಳಲಾಗುವುದು. ಅಂದರೆ ಬಳೆಯನ್ನು ಧರಿಸಿರುವ ಮಹಿಳೆಯರು ಮನೆಯಲ್ಲಿ ಇರಬೇಕು. ಆಗಲೇ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ತುಂಬಿರುತ್ತದೆ ಎಂದು ಹೇಳಲಾಗುವುದು. ಮಹಿಳೆಯ ಸೌಂದರ್ಯ ಹಾಗೂ ಘನತೆಯನ್ನು ಹೆಚ್ಚಿಸುವ ಬಳೆಯು ಸಾಕಷ್ಟು ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯನ್ನು ಒಳಗೊಂಡಿದೆ. ಮಹಿಳೆಯರು ಏಕೆ ಬಳೆಯನ್ನು ತೊಡಬೇಕು? ಅದರ ಹಿನ್ನೆಲೆ ಹಾಗೂ ಮಹತ್ವದ ಬಗ್ಗೆ ಸಾಕಷ್ಟು ವಿಚಾರಗಳಿರುವುದನ್ನು ಕಾಣಬಹುದು.

ಮಹಿಳೆಯರು ಪುರುಷರಿಗಿಂತ ದೈಹಿಕವಾಗಿ ದುರ್ಬಲರಾಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಪುರುಷರೊಂದಿಗೆ ಹೋಲಿಸಿದರೆ ಮಹಿಳೆಯ ಮೂಳೆಗಳು ದುರ್ಬಲವಾಗಿರುತ್ತವೆ ಮತ್ತು ನಾಜೂಕಾಗಿರುತ್ತವೆ. ಬಳೆಗಳನ್ನು ಧರಿಸುವುದರಿಂದ ಮೂಳೆಗಳಿಗೆ ಶಕ್ತಿಯು ಒದಗುತ್ತದೆ ಮತ್ತು ಅದು ಮಹಿಳೆಯರ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ. ಮಹಿಳೆಯು ಬೆಳೆಯುತ್ತಾ ಹೋದಂತೆ, ಅವರು ಮೂಳೆ ಸಂಬಂಧಿತ ರೋಗಳಿಗೆ ಒಳಗಾಗುತ್ತಾರೆ ಹಾಗೂ ಇಂತಹ ವಿವಿಧ ರೋಗಗಳನ್ನು ತಡೆಗಟ್ಟುವಲ್ಲಿ ಬಳೆಗಳು ಸಹಾಯ ಮಾಡುತ್ತವೆ.

ಚಿನ್ನ ಅಥವಾ ಬೆಳ್ಳಿ ಮುಂತಾದ ಬೆಲೆಬಾಳುವ ಲೋಹಗಳಿಂದ ತಯಾರಾದ ಆಭರಣಗಳನ್ನು ಧರಿಸುವುದರಿಂದ ಮಹಿಳೆಯರಿಗೆ ಶಕ್ತಿಯನ್ನು ಒದಗಿಸುತ್ತವೆ ಹಾಗೂ ಅವುಗಳನ್ನು ಧರಿಸಿದ ಮಹಿಳೆಯರಿಗೆ ಒಂದು ಬಗೆಯ ಧನಾತ್ಮಕ ಕಂಪನಗಳು ಅವರ ಸುತ್ತ ರಕ್ಷಣೆಯನು ಒದಗಿಸುತ್ತವೆ. ಪುರಾತನ ಇತಿಹಾಸದ ಪ್ರಕಾರ ಚಿನ್ನ ಅಥವಾ ಬೆಳ್ಳಿಯಿಂದ ಮಾಡಲ್ಪಟ್ಟ ಬಳೆಯು ನಿಮ್ಮ ಚರ್ಮದ ಜೊತೆಗೆ ಸಂಪರ್ಕಕ್ಕೆ ಬಂದಾಗ ಅಲ್ಲಿ ಉಂಟಾಗುವ ಘರ್ಷಣೆಯಿಂದಾಗಿ ಅದರ ಗುಣಗಳು ಮತ್ತು ವೈಶಿಷ್ಟ್ಯಗಳು ನಿಮ್ಮ ದೇಹವನ್ನು ಪ್ರವೇಶಿಸುತ್ತವೆ.

ನಮೆಗೆಲ್ಲರಿಗೂ ತಿಳಿದಿರುವಂತೆ, ಆಯುರ್ವೇದವು ಭಾರತೀಯ ಮೂಲದ್ದಾಗಿದೆ, ಇದು ಅಭರಣಗಳನ್ನು ಧರಿಸುವುದರಲ್ಲಿ ಕೆಲವು ಬಲವಾದ ನಂಬಿಕೆಗಳನ್ನು ಹೊಂದಿದೆ. ಚಿನ್ನ ಮತ್ತು ಬೆಳ್ಳಿಯಂತಹ ಲೋಹಗಳ ಭಸ್ಮವನ್ನು ಬಳಸುವ ಆಯುರ್ವೇದವು ಶಕ್ತಿಯ ಥೆರಪಿಯನ್ನು ನೀಡುತ್ತದೆ. ಇದರ ಸ್ಪಷ್ಟವಾದ ಅರ್ಥವೇನೆಂದರೆ, ಇದು ಪ್ರಬಲವೂ ಮತ್ತು ಶಕ್ತಿಯುತವೂ ಆಗಿದ್ದು, ಬಳೆಯ ರೂಪದಲ್ಲಿ ಧರಿಸುವಂತಹ ಮಹಿಳೆಗೆ ತನ್ನ ಶಕ್ತಿಯನ್ನು ಹಂಚುತ್ತದೆ.

ಪೌರಾಣಿಕ ನಂಬಿಕೆ ನಿಮ್ಮ ಸ್ಮರಣ ಶಕ್ತಿಯ ಹಿಂದೆಯೇ ಇರುಂತಹ ಬಳೆಗಳನ್ನು ಧರಿಸಿರುವ ಬಗ್ಗೆ ಒಂದು ಪೌರಾಣಿಕ ನಂಬಿಕೆ ಇದೆ. ಪುರಾಣದ ಪ್ರಕಾರ, ಮಹಿಳೆಯು ತನ್ನ ಪತಿಯ ಸುರಕ್ಷತೆಗಾಗಿ ಬಳೆಗಳನ್ನು ಧರಿಸಿರಬೇಕು ಮತ್ತು ಇದು ತನ್ನ ಪತಿಯ ವಯಸ್ಸನ್ನು ಹೆಚ್ಚಿಸಬಲ್ಲದು. ವಿವಾಹಿತ ಮಹಿಳೆಯರು ಬಳೆಗಳನ್ನು ಏಕೆ ಧರಿಸುತ್ತಾರೆ ಎಂಬುದು ಇದರಿಂದ ಸಾಬೀತಾಗಿದೆ.

ಒಂದಕ್ಕೊಂದು ತಾಗುವ ಮೂಲಕ ಬಳೆಗಳಿಂದ ಉಂಟಾಗುವ ಬಳೆಗಳ ಕಿಣಿಕಿಣಿ ಶಬ್ದವು ಋಣಾತ್ಮಕ ಕಂಪನಗಳನ್ನು ದೂರವಿರಿಸುತ್ತದೆ ಹಾಗೂ ಅನಪೇಕ್ಷಿತ ಶಕ್ತಿಯು ಹತ್ತಿರ ಸುಳಿಯದಂತೆ ನಿಮ್ಮ ಮನೆಯಿಂದ ದೂರವಿರುತ್ತದೆ. ನಿಮ್ಮ ಹಿರಿಯರು ನಂಬಿಕೆಯ ಪ್ರಕಾರ ಈ ರೀತಿ ಹೇಳುತ್ತಾರೆ, ‘ಮನೆಯಲ್ಲಿ ಬಳೆಗಳ ಶಬ್ದವು ನಮ್ಮ ಪವಿತ್ರ ದೇವಾನುದೇವತೆಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಸುಖಿಯಾಗಿರಿಸುತ್ತದೆ’. ಬಳೆಗಳನ್ನು ಧರಿಸುವುದಕ್ಕೆ ಸಂಬಂಧಪಟ್ಟ ಅತ್ಯಂತ ಪುರಾತನ ಸಂಗತಿಯೊಂದು ಬಹಳ ಸ್ಪಷ್ಟವಾಗಿದೆ. ಹಿಂದಿನ ಹಳೆಯ ಕಾಲದಲ್ಲಿ ‘ಪಾರ್ದಾ ಪ್ರಥಾ’ ಅನ್ನು ಅಭ್ಯಸಿಸಿದಾಗ, ಮಹಿಳೆಯರು ತಮ್ಮ ಮುಖದ ಮೇಲೆ ಧರಿಸುತ್ತಿದ್ದ ತಮ್ಮ ದುಪ್ಪಟ್ಟಾಗಳನ್ನು ಧರಿಸುವ ಮೂಲಕ ತಮ್ಮ ಮುಖಗಳನ್ನು ಮುಚ್ಚಿ ಇರಿಸಿಕೊಳ್ಳಬೇಕಾಗಿತ್ತು. ಪುರುಷರನ್ನು ತಮ್ಮ ಮಿತಿಗಳಲ್ಲಿ ಇರಿಸಿಕೊಳ್ಳಲು ಹಾಗೂ ತಮ್ಮ ಮನೆಗಳಲ್ಲಿ ಹಿರಿಯರಿಗೆ ಗೌರವದ ಸಂಕೇತವೆಂದು ಈ ಸಂಪ್ರದಾಯವನ್ನು ಪರಿಗಣಿಸಲಾಗಿತ್ತು. ಪುರುಷರು ಈ ವ್ಯವಸ್ಥೆಯನ್ನು ಗೌರವಿಸಿದ್ದರು, ಅದರ ಅರ್ಥ ಒಬ್ಬ ಮಹಿಳೆಗೆ ಅವಮಾನಿಸುವ ಉದ್ದೇಶವೂ ಎಂದಿಗೂ ಇರಲಿಲ್ಲ. ಅದಕ್ಕಾಗಿಯೇ ಅವರು ಬಳೆಗಳ ಕಿಣಿಕಿಣಿ ಧ್ವನಿ ಕೇಳಿದಾಗ ಮಹಿಳೆಗೆ ಮುಜುಗರಕ್ಕೆ ಒಳಗಾಗುವ ಯಾವುದೇ ಕೆಲಸವನ್ನು ತಕ್ಷಣವೇ ನಿಲ್ಲಿಸಿ ನಿಂತುಬಿಡುತ್ತಿದ್ದರು.