ಟೊಮೆಟೊ ಎಗ್ ರೈಸ್ ಮಾಡುವ ವಿಧಾನ

01/12/2020

ಸಾಮಾಗ್ರಿಗಳು : ಟೊಮೆಟೊ 2(ಕತ್ತರಿಸಿದ್ದು), ಟೊಮೆಟೊ ಕೆಚಪ್ 4 ಚಮಚ, ಮೊಟ್ಟೆ 4(ಬೇಯಿಸಿ, ಚಿಕ್ಕ ತುಂಡುಗಳಾಗಿ ಕತ್ತರಿಸಿದ್ದು), ಹಸಿ ಮೆಣಸಿನಕಾಯಿ 2, ಹಸಿ ಮೊಟ್ಟೆ 2, ಬಾಸುಮತಿ ಅಕ್ಕಿ 2 ಕಪ್, ಎಣ್ಣೆ 3 ಚಮಚ, ಬೆಳ್ಳುಳ್ಳಿ2 ಚಮಚ, ರುಚಿಗೆ ತಕ್ಕ ಉಪ್ಪು, ಕರಿ ಮೆಣಸಿನ ಪುಡಿ ಅರ್ಧ ಚಮಚ, ಚಿಕ್ಕ ಈರುಳ್ಳಿ 8, ಸೋಯಾ ಸಾಸ್ 2 ಚಮಚ, ಜೋಳದ ಪುಡಿ 2 ಚಮಚ, ವಿನಿಗರ್
ಕೊತ್ತಂಬರಿ ಸ್ವಲ್ಪ

ತಯಾರಿಸುವ ವಿಧಾನ : ಅನ್ನವನ್ನು ಮಾಡಿಡಬೇಕು. ಎಣ್ಣೆಯನ್ನು ಸ್ವಲ್ಪ ದೊಡ್ಡ ಬಾಣಲೆಗೆ ಹಾಕಿ ಅದರಲ್ಲಿ ಬೆಳ್ಳುಳ್ಳಿ ಹಾಗೂ ಚಿಕ್ಕ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ , ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ.

ಈಗ ರುಚಿಗೆ ಉಪ್ಪು, ಕರಿ ಮೆಣಸಿನ ಪುಡಿ 2 ನಿಮಿಷ ಹುರಿಯಿರಿ, ನಂತರ ಹಸಿ ಮೊಟ್ಟೆಯನ್ನು ಹಾಕಿ ಫ್ರೈ ಮಾಡಿ. ನಂತರ ಮೊಟ್ಟೆಯ ಚೂರುಗಳನ್ನು ಹಾಕಿ. ಸೌಟ್ ನಿಂದ ಆಡಿಸಿ.

ಇದೇ ಸಮಯದಲ್ಲಿ ಜೋಳದ ಹಿಟ್ಟಿಗೆ ವಿನಿಗರ್ 1ಚಮಚ ಹಾಕಿ ಸ್ಚಲ್ಪ ನೀರು ಹಾಕಿ ಮಿಶ್ರ ಮಾಡಿ, ನಂತರ ಇದನ್ನು ಅನ್ನದ ಜೊತೆ ಹಾಕಿ ಮಿಶ್ರಣ ಮಾಡಿ. ನಂತರ ಟೊಮೆಟೊ ಕೆಚಪ್, ಸೋಯಾ ಸಾಸ್ ಹಾಕಿ, ಸೌಟ್ ನಿಂದ ಎರಡು ನಿಮಿಷ ಆಡಿಸಿ ನಂತರ ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಟೊಮೆಟೊ ಎಗ್ ರೈಸ್ ರೆಡಿ.