ಡಿ.9 ರಂದು ಕುಟ್ಟ ಕೊಡವ ಸಮಾಜದ ಮಹಾಸಭೆ

01/12/2020

ಮಡಿಕೇರಿ ಡಿ. 1 : ಕುಟ್ಟ ಕೊಡವ ಸಮಾಜದ 2019-20ನೇ ಸಾಲಿನ ಮಹಾಸಭೆಯು ಡಿ. 9 ರಂದು ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10.30ಕ್ಕೆ ಕುಟ್ಟ ಕೊಡವ ಸಮಾಜದ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಸಮಾಜದ ಸದಸ್ಯರು ಕೋವಿಡ್ ಹಿನ್ನೆಲೆ ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವಂತೆ ( ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು) ವಿಷ್ಣು ಕಾರ್ಯಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.