ಎರಡು ಪ್ರತ್ಯೇಕ ಪ್ರಕರಣ : ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು : ಕಡಂಗಮರೂರು ಮತ್ತು ನೆಲ್ಲಿಹುದಿಕೇರಿಯಲ್ಲಿ ಘಟನೆ

01/12/2020

ಮಹಿಳೆ ಆತ್ಮಹತ್ಯೆ : ಕಡಂಗಮರೂರು ಗ್ರಾಮದಲ್ಲಿ ಘಟನೆ

ಮಹಿಳೆ ಆತ್ಮಹತ್ಯೆ : ಕಡಂಗಮರೂರು ಗ್ರಾಮದಲ್ಲಿ ಘಟನೆ
ಮಡಿಕೇರಿ ಡಿ.1 : ವಿರಾಜಪೇಟೆ ಗ್ರಾಮಾಂತರ ಪ್ರದೇಶ ಕಡಂಗಮರೂರು ಗ್ರಾಮದ ನಿವಾಸಿ ಸೋಮಯ್ಯ ಅವರ ಪತ್ನಿ ಮೀನಾ(57) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ವರ್ಷಗಳಿಂದ ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪುತ್ರ ಸಂತೋಷ್ ನೀಡಿದ ದೂರಿನ ಆಧಾರದ ಮೇಲೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ನೇಣಿಗೆ ಶರಣು : ನೆಲ್ಯಹುದಿಕೇರಿ ಗ್ರಾಮದಲ್ಲಿ ಪ್ರಕರಣ
ಮಡಿಕೇರಿ ಡಿ.1 : ವಿರಾಜಪೇಟೆ ಸಿದ್ದಾಪುರ ನೆಲ್ಯಹುದಿಕೇರಿ ಗ್ರಾಮದ ನಿವಾಸಿ ದಿವಂಗತ ಉಣ್ಣಿ ಎಂಬುವವರ ಪುತ್ರ ವಿಜು ಕೆ.ಯು(39) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡ್ ಪಾಲಿಶಿಂಗ್ ಕೆಲಸ ಮಾಡುತ್ತಿದ್ದ ಮೃತ ವಿಜು ವಿವಾಹಿತನಾಗಿದ್ದು, ವಿರಾಜಪೇಟೆ ಪಟ್ಟಣದ ಪಂಜರ್‍ಪೇಟೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಮೃತನ ಅಣ್ಣ ಶ್ರೀಜು ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.