ಸೋಮವಾರಪೇಟೆ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಮಂಜುಳಾ ಆಯ್ಕೆ

01/12/2020

ಮಡಿಕೇರಿ ಡಿ. 1 : ಸೋಮವಾರಪೇಟೆ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಚೌಡ್ಲು ಗ್ರಾಮದ ಮಂಜುಳಾ ಸುಬ್ರಮಣಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹಾನಗಲ್ ಗ್ರಾಮದ ಎ.ಎನ್. ತಂಗಮ್ಮ ಆಯ್ಕೆಯಾಗಿದ್ದಾರೆ.
ಕೊಡಗು ಜಿಲ್ಲಾ ಬಿಜೆಪಿ ಮಾಹಿಳಾ ಮೋರ್ಚಾದ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಅವರು ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ.
ಆಯ್ಕೆಯಾದ ಇಬ್ಬರಿಗೂ ಜಿಲ್ಲಾ ಬಿಜೆಪಿ ಕೊಡಗು ಮತ್ತು ಮಂಡಲ ಬಿಜೆಪಿ ಸೋಮವಾರಪೇಟೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.