ಸೋಮವಾರಪೇಟೆ ಗ್ರಾಮಗಳಲ್ಲಿ ಪುತ್ತರಿ ಹಬ್ಬದ ಸಂಭ್ರಮ

01/12/2020

ಸೋಮವಾರಪೇಟೆ ಡಿ. 1 : ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಪುತ್ತರಿ ಹಬ್ಬವನ್ನು ಸುತ್ತಮುತ್ತಲಿನ ಗ್ರಾಮಸ್ಥರು ಸೋಮವಾರ ರಾತ್ರಿ ಸಂಭ್ರಮ ಸಡಗರದಿಂದ ಆಚರಿಸಿದರು.
ಕಿರಗಂದೂರು ಗ್ರಾಮಸ್ಥರು, ಎಚ್.ಎ.ನಾಗರಾಜ್ ಅವರ ಗದ್ದೆಯಲ್ಲಿ ರಾತ್ರಿ 8.45ಕ್ಕೆ ಸಾಮೂಹಿಕವಾಗಿ ಕದಿರು(ಭತ್ತದ ಪೈರು) ತೆಗೆದರು. ಗ್ರಾಮದ ಸಮೃದ್ಧಿಗಾಗಿ ಮನೆ ದೇವರನ್ನು ಪ್ರಾರ್ಥಿಸಿದರು.
ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಮಂದಿ ಕದಿರು ಹಿಡಿದು ಸಂಭ್ರಮಿಸಿ ಮನೆಯ ತೆರಳಿ, ಪೂಜೆ ಸಲ್ಲಿಸಿದರು. ಸೇನೆಮನೆ, ಒದ್ದಳ್ಳಿ ಮನೆ, ಅಚ್ಚೇಗೌಡ್ನಮನೆ, ಹೊನ್ನೇಗೌಡ್ನ ಮನೆ, ಚಿನ್ನಳ್ಳಿ ಮನೆ, ಮುಂಭಾಗಿಲ ಮನೆ. ಸಿಂಗೂರು ಮನೆ, ಬಸವೇಗೌಡ್ನ ಮನೆ, ಕೋವರೆ ಮನೆ, ಲಿಂಗರಾಜ ಮನೆ ಇವೆಲ್ಲಾ ಕುಂಟುಂಬಗಳು ಸಂಭ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಎಂ.ದಯಾನಂದ, ಶಿವಕುಮಾರ್, ಕೆ.ಇ.ಭರತ್, ಕುಶಾಲಪ್ಪ, ಬಸವರಾಜು, ಗೌತಮ್ ಕಿರಗಂದೂರು ಮತ್ತಿತರರು ಇದ್ದರು.