ಸೋಮವಾರಪೇಟೆ ಕೊಡವ ಸಮಾಜದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಪುತ್ತರಿ

01/12/2020

ಸೋಮವಾರಪೇಟೆ ಡಿ. 1 : ಕೊಡವ ಸಮಾಜದ ವತಿಯಿಂದ ಪುತ್ತರಿಯನ್ನು ಸಾಂಪ್ರದಾಯಕವಾಗಿ ಹುತ್ತರಿ ಆಚರಿಸಲಾಯಿತು.
ಕೊಡವ ಸಮಾಜದ ನೆಲ್ಲಕ್ಕಿ ನಡುಬೇಡದಲ್ಲಿ ಪೂಜೆ ಸಲ್ಲಿಸಿ, ವಾದ್ಯದೊಂದಿಗೆ ಅಂಜನೇಯ ದೇವಾಲದ ಸಮೀಪವಿರುವ ಸಮಾಜದ ಗದ್ದೆಯಲ್ಲಿ ಕದಿರು ತೆಗೆಯಲಾಯಿತು.
ನಂತರ ಸಮಾಜದಲ್ಲಿ ಪೂಜೆ ಸಲ್ಲಿಸಿ ಕದಿರು ವಿತರಿಸಲಾಯಿತು. ಕೊಡವ ಸಮಾಜದ ಅಧ್ಯಕ್ಷ ಮಾಳೇಟ್ಟಿರ ಅಭಿಮನ್ಯು ಕುಮಾರ್, ಉಪಾಧ್ಯಕ್ಷ ಬಾಚಿನಾಡಂಡ ಪೂಣಚ್ಚ, ಕಾರ್ಯದರ್ಶಿ ಪಂದ್ಯಾಂಡ ಶರತ್ ಮತ್ತಿತರರು ಇದ್ದರು.