ವಿರಾಜಪೇಟೆಯಲ್ಲಿ ಲಾಟರಿ ದಂಧೆ : ಓರ್ವನ ಬಂಧನ

01/12/2020

ಮಡಿಕೇರಿ ಡಿ.1 : ವಿರಾಜಪೇಟೆಯಲ್ಲಿ ಲಾಟರಿ ದಂಧೆ ನಡೆಸುತ್ತಿದ್ದ ಕ್ಯಾಂಟೀನ್ ಮಾಲೀಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮಾರುಕಟ್ಟೆ ಬಳಿ ಕ್ಯಾಂಟೀನ್ ನಡೆಸುತ್ತಿದ್ದ ಕೆ.ಎ.ಲತೀಫ್ (35) ಎಂಬಾತನೇ ಬಂಧಿತ ಆರೋಪಿ. ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ದಾಳಿ ನಡೆಸಿದ ವಿರಾಜಪೇಟೆ ಪೊಲೀಸರು 2,400 ರೂ. ಮೌಲ್ಯದ 60 ಲಾಟರಿ ಟಿಕೆಟ್ ಗಳು ಮತ್ತು ಲಾಟರಿ ಮಾರಾಟದಿಂದ ಲಭಿಸಿದ 1800 ರೂ. ನಗದು ವಶಕ್ಕೆ ಪಡೆದರು. ನಂತರ ಲತೀಫ್ ನನ್ನು ವಿಚಾರಣೆಗೊಳಪಡಿಸಿದರು.
ವಿರಾಜಪೇಟೆ ಉಪವಿಭಾಗದ ಡಿ.ವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕÀ ಕ್ಯಾತೇಗೌಡ ನಿರ್ದೇಶನದಲ್ಲಿ ನಗರ ಪಿ.ಎಸ್.ಐ ಗಳಾದ ಜಗದೀಶ್ ಶೆಟ್ಟಿ, ಬೋಜಪ್ಪ, ಸಿಬ್ಬಂದಿಗಳಾದ ಎನ್.ಎಸ್.ಲೊಕೇಶ್, ಗಿರೀಶ್ ಮುಸ್ತಫಾ ಹಾಗೂ ಚಾಲಕ ಪೂವಯ್ಯ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.