ವಳಗುಂದ ಕಾಫಿ ತೋಟದಲ್ಲಿ ಕಳವು : ಓರ್ವನ ಬಂಧನ

December 1, 2020

ಸೋಮವಾರಪೇಟೆ ಡಿ.1 : ಸಮೀಪದ ವಳಗುಂದ ಗ್ರಾಮದ ಕಾಫಿ ತೋಟವೊಂದರಲ್ಲಿ ಮರ ಕೊಯ್ಯುವ ಯಂತ್ರ ಮತ್ತು 6 ಏಣಿಯನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಳಗುಂದ ಗ್ರಾಮದ ಹರೀಶ್ ಬಂಧಿತ ಆರೋಪಿ, ಮತ್ತೋರ್ವ ಆರೋಪಿ ಮಂಜುನಾಥ ತಲೆಮರೆಸಿಕೊಂಡಿದ್ದಾನೆ.
ವಳಗುಂದ ಗ್ರಾಮದ ಬಿ.ಜಿ.ರಮೇಶ್ ಎಂಬುವರ ಕಾಫಿ ತೋಟದಿಂದ ಕಳವು ಮಾಡಲಾಗಿದ್ದ ಸುಮಾರು ರೂ.76ಸಾವಿರ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಎರಡು ಪ್ರಕರಣಗಳ ಕಾರ್ಯಾಚರಣೆಯಲ್ಲಿ ಡಿವೈಎಸ್‍ಪಿ ಶೈಲೇಂದ್ರ ಹಾಗು ಸಿಪಿಐ ಮಹೇಶ್ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಶ್ರೀಧರ್, ಅಪರಾಧ ವಿಭಾಗದ ಪಿಎಸ್‍ಐ ವಿರೂಪಾಕ್ಷ ಮತ್ತು ಸಿಬ್ಬಂದಿಗಳಾದ ನವೀನ್, ಬಸಪ್ಪ, ಮಧು, ರಮೇಶ್, ಪ್ರವೀಣ್, ವೀಣಾ, ಕೇಶವ, ಸಿದ್ಧರಾಮ ಪಾಲ್ಗೊಂಡಿದ್ದರು.

error: Content is protected !!