ಮರ ಬಿದ್ದು ಕಾರ್ಮಿಕ ಸಾವು : ಮಾಲಂಬಿ ಗ್ರಾಮದಲ್ಲಿ ಘಟನೆ

01/12/2020

ಸೋಮವಾರಪೇಟೆ ಡಿ.1 : ಟಿಂಬರ್ ಕೆಲಸ ಮಾಡುವಾಗ ಅಕಸ್ಮಿಕವಾಗಿ ಮರ ಬಿದ್ದ ಪರಿಣಾಮ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಸಮೀಪದ ಮಾಲಂಬಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಕಾಗಡಿಕಟ್ಟೆಯ ಮುನಿಸ್ವಾಮಿ ಎಂಬುವರ ಪುತ್ರ ಸುಬ್ರಮಣಿ(35) ಮೃತಪಟ್ಟ ಕಾರ್ಮಿಕ. ಮಾಲಂಬಿ ಭಾಗೀರಥಿ ಎಂಬುವರ ತೋಟದಲ್ಲಿ ಸಿಲ್ವರ್ ಮರ ಕಡಿಯುತ್ತಿದ್ದ ಸಂದರ್ಭ ಮರ ಬಿದ್ದು ತೀವ್ರ ಗಾಯಗೊಂಡಿದ್ದಾರೆ.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ಮೃತದೇಹ ಸೋಮವಾರಪೇಟೆ ಶವಾಗಾರದಲ್ಲಿದ್ದು, ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.