ಸುಂಟಿಕೊಪ್ಪದ ವಿವಿಧೆಡೆ ಪುತ್ತರಿ ಹಬ್ಬ ಆಚರಣೆ

01/12/2020

ಸುಂಟಿಕೊಪ್ಪ ಡಿ.1 : ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ವಿಶ್ವ ಹಿಂದೂ ಪರಿಷತ್ತು ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ರಾಮ ಮಂದಿರದಲ್ಲಿ ಪೂಜೆ, ಪ್ರಾರ್ಥನೆಯ ನಂತರ ನೆರೆಕಟ್ಟಿ ಸಂಪ್ರದಾಯದಂತೆ ಪಟ್ಟೆಮನೆ ಉದಯ ಕುಮಾರ್ ಅವರ ಗದ್ದೆಯಲ್ಲಿ ಹಿರಿಯರಿಂದ ಪೂಜಾ ಕೈಂಕಾರ್ಯಗಳು ನಡೆದು ಕದಿರು ತೆಗೆದು ಸಾರ್ವಜನಿಕರಿಗೆ ಹಂಚಲಾಯಿತು. ನಂತರ ವಾಪಾಸು ದೇವಾಲಯಕ್ಕೆ ಆಗಮಿಸಿ ಪೂಜೆಯೊಂದಿಗೆ ಕದಿರನ್ನು ಕಟ್ಟುವ ಮೂಲಕ ಪುತ್ತರಿ ಆಚರಿಸಲಾಯಿತು. ನೆರೆದವರಿಗೆ ಸಮಿತಿ ವತಿಯಿಂದ ತಂಬಿಟ್ಟು ವಿತರಿಸಲಾಯಿತು.
ರಾಮ ಮಂದಿರದ ಹಿರಿಯ ಅರ್ಚಕ ಹಾ.ಮಾ.ಗಣೇಶ್ ಶರ್ಮಾ, ವಿಶ್ವ ಹಿಂದೂ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ, ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್, ಕಾರ್ಯದರ್ಶಿ ಸುರೇಶ್ ಗೋಪಿ, ಎ.ಶ್ರೀಧರ್ ಕುಮಾರ್, ಶಿವಮಣಿ, ಅಶೋಕ್ ಶೇಟ್, ಅಣ್ಣು ಶೇಖರ್,ಪಿ.ಆರ್.ಸುನಿಲ್ ಕುಮಾರ್, ಪ್ರಶಾಂತ್ ಕುಮಾರ್, ಅರ್ಚಕ ದರ್ಶನ್ ಭಟ್, ಇತರರು ಇದ್ದರು.
ಪನ್ಯ: ಪನ್ಯದ ಬೆಳ್ಳಾರಿಕಮ್ಮ ದೇವಾಲಯದಲ್ಲಿ ಪೂಜೆ, ಪ್ರಾರ್ಥನೆಯ ನಂತರ ದೇವಾಲಯದ ಹಿರಿಯರಾದ ಕಾಳಚೆಟ್ಟಿರ ಪೂವಯ್ಯ ಅವರ ಮನೆಯಲ್ಲಿ ಸಂಪ್ರದಾಯದಂತೆ ನೆರೆಕಟ್ಟಿ ದೇವಾಲಯದÀ ಗದ್ದೆಯಲ್ಲಿ ಹುತ್ತರಿಯನ್ನು ಆಚರಿಸಲಾಯಿತು.
ಪನ್ಯ ತೋಟದ ಮಾಲೀಕ ಎಸ್.ಎಸ್.ಸಂದೇಶ್, ದೇವಾಲಯದ ಕಾಳಚೆಟ್ಟಿರ ಪೂವಯ್ಯ, ದಿನು ದೇವಯ್ಯ, ಧನುಕಾವೇರಪ್ಪ, ಪ್ರದೀಪ್, ಚಂದ್ರಶೇಖರ್ ಇತರರು ಇದ್ದರು.
ಕೆದಕಲ್ ಹೊರೂರು: ಹೊರೂರು ಮಠದ ಗದ್ದೆಯಲ್ಲಿ ದೇವಿಪ್ರಸಾದ್ ಕಾಯಾರ್‍ಮಾರ್ ಅವರ ನೇತೃತ್ವದಲ್ಲಿ ಕದಿರು ತೆಗೆದು ಹುತ್ತರಿ ಹಬ್ಬವನ್ನು ಸಂಭ್ರಮಿಸಲಾಯಿತು.