ಜಿಎಸ್‍ಟಿ ಸಂಗ್ರಹ ಶೇ. 1.42 ರಷ್ಟು ಹೆಚ್ಚಳ

02/12/2020

ನವದೆಹಲಿ ಡಿ.2 : ಕೊರೋನಾ ಸೋಂಕಿನ ಭೀತಿಯ ನಂತರ ಆನ್ ಲಾಕ್ ಮಾರ್ಗಸೂಚಿಯಂತೆ ದೇಶದಲ್ಲಿ ವ್ಯಾಪಾರ ವಹಿವಾಟು ಕೊಂಚ ಚೇತರಿಸಿಕೊಂಡಿದೆ. ಇದರಿಂದಾಗಿ ನವೆಂಬರ್ ಒಂದೇ ತಿಂಗಳಿನಲ್ಲಿ 1,04,963 ಕೋಟಿ ರೂ. ಜಿಎಸ್ ಟಿ ತೆರಿಗೆ ಸಂಗ್ರಹವಾಗಿರುವುದಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇಕಡ 1.42 ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಸಕ್ತ ವರ್ಷದ ನವೆಂಬರ್ ತಿಂಗಳಲ್ಲಿ ಒಟ್ಟಾರೆಯಾಗಿ 1,04,963 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಸಂಗ್ರಹವಾಗಿದೆ.
ಇದರಲ್ಲಿ ಕೇಂದ್ರ ಜಿಎಸ್‍ಟಿ 19,189 ಕೋಟಿ ರೂ., ರಾಜ್ಯ ಜಿಎಸ್‍ಟಿ 25,540 ಕೋಟಿ ರೂ., ಐಜಿಎಸ್‍ಟಿ 51,992 ಕೋಟಿ (ಸರಕುಗಳ ಆಮದಿನಿಂದ ಸಂಗ್ರಹಿಸಿದ 22,078 ಕೋಟಿ ರೂ.ಸೇರಿದಂತೆ) ಮತ್ತು ಸೆಸ್, 8,242 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 9 809 ಕೋಟಿ ಸೇರಿದಂತೆ) ಗಳಾಗಿದೆ. 2020 ರ ನವೆಂಬರ್ 30 ರವರೆಗೆ ನವೆಂಬರ್ ತಿಂಗಳಿಗೆ ಸಲ್ಲಿಸಲಾದ ಒಟ್ಟು ಜಿಎಸ್‍ಟಿಆರ್ -3 ಬಿ ರಿಟನ್ರ್ಸ್ ಸಂಖ್ಯೆ 82 ಲಕ್ಷವಾಗಿದೆ.