ದೋಣಿ ದುರಂತ : 2 ಮೃತದೇಹ ಪತ್ತೆ

02/12/2020

ಮಂಗಳೂರು ಡಿ.2 : ಮಂಗಳೂರಿನಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಆರು ಮೀನುಗಾರರ ಪೈಕಿ ಇಬ್ಬರ ಮೃತದೇಹ ಇಂದು ಪತ್ತೆಯಾಗಿದೆ.
ಪಾಂಡುರಂಗ ಸುವರ್ಣ (58) ಹಾಗೂ ಚಿಂತನ್ (21) ಎನ್ನುವವರ ಮೃತದೇಹಗಳು ಪತ್ತೆಯಾಗಿದೆ.
ಉಳ್ಳಾಲದ ಪಶ್ಚಿಮ ಭಾಗದ ಸಮುದ್ರದಲ್ಲಿ ಸೋಮವಾರ ಸಂಜೆ ಬೋಳಾರದ ಪ್ರಶಾಂತ ಎಂಬವರ ಮಾಲಕತ್ವದ ಶ್ರೀರಕ್ಷಾ ಹೆಸರಿನ ಪರ್ಸಿನ್ ದೋಣಿ ಮಗುಚಿ ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದರು.
ಶೋಧ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹವನ್ನು ಇಂದು ಮಧ್ಯಾಹ್ನದ ವೇಳೆ ಮೇಲೆತ್ತಲಾಗಿದೆ. ಮೃತದೇಹವನ್ನು ಮಂಗಳೂರಿನ ದಕ್ಕೆಗೆ ತರಲಾಗಿದೆ.
ದೋಣಿ ಮುಳುಗುವಾಗ 25 ಮೀನುಗಾರರು ಇದ್ದರು. ಈ ಪೈಕಿ ಆರು ಮಂದಿ ನಾಪತ್ತೆಯಾಗಿದ್ದಾರೆ. ಉಳಿದವರ ರಕ್ಷಣೆ ಮಾಡಲಾಗಿದೆ.