ಎಸ್.ವೈ.ಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಶೀರ್ ಹಾಜಿ ಅವಿರೋಧ ಆಯ್ಕೆ

02/12/2020

ಮಡಿಕೇರಿ ಡಿ. 2 : ಸಿದ್ದಾಪುರ ಸುನ್ನಿ ಯುವಜನ ಸಂಘ ಇದರ ಕೊಡಗು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಿದ್ದಾಪುರ ವರಕ್ಕಲ್ ಪೂಕೋಯ ತಂಙಳ್ ಸ್ಮಾರಕ ಭವನದಲ್ಲಿ ನಡೆಯಿತು. ಪದಾಧಿಕಾರಿಗಳನ್ನು ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಿಪಿಎಂ ಬಶೀರ್ ಹಾಜಿ‌ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಮೊಹಮ್ಮದ್ ಅಲಿ, ರಫೀಕ್ ,ಇಬ್ರಾಹಿಂ ಹಾಜಿ, ಹಂಸ ಹಾಜಿ, ರಫೀಕ್ ಹಾಜಿ ,ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಎಂ.ವೈ ಅಶ್ರಫ್ ಫೈಜಿ, ಕಾರ್ಯನಿರತ ಕಾರ್ಯದರ್ಶಿಯಾಗಿ ಸಿ.ಎಂ ಹಮೀದ್ ಮೌಲವಿ ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಗಳಾಗಿ ಅಬೂಬಕರ್ ಮುಸ್ಲಿಯಾರ್, ಮಾಹಿನ್ ಹಾಜಿ, ಕೆ ಈಸಾ, ಮೊಹಮ್ಮದ್ ಹಾಜಿ ಆಯ್ಕೆಯಾಗಿದ್ದಾರೆ. ಆರ್ಗನೈಸರ್ ಆಗಿ ಇಕ್ಬಾಲ್ ಮೌಲವಿ, ಕೆಸಿ ಮೊಯ್ದೀನ್, ನೌಶಾದ್ ಪಿಯು ಹಾಗೂ 52 ಸದಸ್ಯರು ಕಾರ್ಯಕಾರಿ ಸಮಿತಿ ಸದಸ್ಯರಾಗಿ‌ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ‌ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಜಿ ವಹಿಸಿದರು.

ಈ‌ ಸಂದರ್ಭ ಮಾತನಾಡಿದ ಅಬ್ದುಲ್ಲ ಫೈಝಿ 1954ರಲ್ಲಿ 20 ನೇ ಸಮಸ್ತ ಸಮ್ಮೇಳನದಲ್ಲಿ ಯುವ ಸಮೂಹವನ್ನು ಬಹು ಜನತೆಯನ್ನು ಸಮಸ್ತದ ಪತಾಕೆ ಅಡಿಯಲ್ಲಿ ಒಗ್ಗೂಡಿಸಿ ತಲ ಹಂತದಿಂದಲೇ ಸಮಸ್ತಕ್ಕೆ ವ್ಯವಸ್ಥಿತ ಶಿಸ್ತುಬದ್ಧ ಸಂಘಟನಾ ಶಕ್ತಿಯ ಹೊಸ‌ ರೂಪ ನೀಡುವ ಉದ್ದೇಶದೊಂದಿಗೆ ಸಮಸ್ತದ ಅಧೀನದಲ್ಲಿ ಯುವಜನ ಪ್ರಸ್ಥಾನವನ್ನು ರಚಿಸಲಾಯಿತು.

ನಮ್ಮ ಕೊಡಗು ಜಿಲ್ಲೆಯಲ್ಲಿ 17 ಶಾಖೆಗಳು ದೇಶದಾದ್ಯಂತ 5 ಸಾವಿರಕ್ಕಿಂತಲೂ ಹೆಚ್ಚು ಶಾಖೆಗಳು ಕಾರ್ಯಾನಿರ್ವಹಿಸುತ್ತಿದೆ.
ಅಲ್ಲದೆ ವಿದೇಶಗಳಲ್ಲಿಯೂ ಎಸ್.ವೈ ಎಸ್ ಹಲವಾರು ಸಾಮಾಜಿಕ ಶೈಕ್ಷಣಿಕ ಕಾರುಣ್ಯ ಸೇವೆಗಳನ್ನು ಮಾಡುತ್ತಾ ನಮ್ಮ ದೇಶಕ್ಕೆ ಕೀರ್ತಿಯನ್ನು ತಂದುಕೊಟ್ಟಿದೆ ಎಂದರು .

ನಮ್ಮ ದೇಶ,ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪ, ಭೂ ಕುಸಿತ, ನೆರೆಹಾವಳಿ ಮುಂತಾದ ಅನಾಹುತದ ಸಂದರ್ಭಗಳಲ್ಲಿ ತಕ್ಷಣ ಕಾರ್ಯಾಚರಿಸಲು ಕಾರುಣ್ಯ ಸೇವೆ ತಂಡವನ್ನು ಎಸ್.ವೈ.ಎಸ್ ಇದರ ಅಧೀನದಲ್ಲಿ ರಚನೆ ಮಾಡಿ ಕಾರ್ಯಚರಿಸುತ್ತಿದೆ. ಸಮಾಜದಲ್ಲಿರುವ ಬಡ, ನಿರ್ಗತಿಕ ವರ್ಗ, ರೋಗದಿಂದ ಬಳಲುತ್ತಿರುವವರಿಗೆ ರಕ್ಷಣೆ ನೀಡಿ ಆಶ್ರಯ ಕೊಡಲು ಇನ್ನೊಂದು ಸಹಾಯ ತಂಡವನ್ನು ರಚನೆ ಮಾಡಲಾಗಿದೆ . ಈ ಎಲ್ಲಾ ತಂಡವು ಸಮಸ್ತ ನಾಯಕರ ಮಾರ್ಗದರ್ಶನದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅಬ್ದುಲ್ಲ ಫೈಜಿ ಹೇಳಿದರು.

ಬಶೀರ್ ಹಾಜಿಯವರು ಸಭೆಯನ್ನು ಉದ್ಘಾಟಿಸಿದರು.ಲತೀಫ್ ಹಾಜಿ ಬೆಂಗಳೂರು, ಎಸ್.ವೈ.ಎಸ್ ರಾಜ್ಯ ನಾಯಕರಾದ ಉಮ್ಮರ್ ಫೈಜಿ, ಆರಿಫ್ ಫೈಝಿ ,ಇಕ್ಬಾಲ್ ಮೌಲವಿ ಹಾಗೂ ಇನ್ನಿತರರು ಇದ್ದರು.