ನಾವು ಉಪವಾಸ ಏಕೆ ಮಾಡಬೇಕು ?

02/12/2020

ದೇವರನ್ನು ಒಲಿಸಿಕೊಳ್ಳಲು ನಾವು ಆಚರಿಸುವ ಉಪವಾಸವು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಸಕಾರಾತ್ಮಕ ಶಕ್ತಿಯನ್ನು, ಸಕಾರಾತ್ಮಕ ಚಿಂತನೆಯನ್ನು ಪಡೆದುಕೊಳ್ಳಲು ಸ್ವ ಇಚ್ಛೆಯಿಂದ ಊಟವನ್ನು ಅಥವಾ ಸಂಪೂರ್ಣ ಆಹಾರವನ್ನು ತ್ಯಾಗ ಮಾಡಿದರೆ ಅದು ಉಪವಾಸವಾಗುತ್ತದೆ. ಉಪವಾಸವು ಮನಸ್ಸನ್ನು ಮತ್ತು ದೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಉಪವಾಸದ ಸಮಯದಲ್ಲಿ ಓರ್ವ ವ್ಯಕ್ತಿಯು ತನ್ನನ್ನು ತಾನು ನಿಯಂತ್ರಿಸಿಕೊಳ್ಳುತ್ತಾನೆ ಇದರಿಂದ ಅವನಲ್ಲಿದ್ದ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ.

ಹಿಂದಿಯಲ್ಲಿ ವ್ರತ ಎಂದು ಕರೆಯಲ್ಪಡುವ ಉಪವಾಸವು ಕಠಿಣ ಅಭ್ಯಾಸ ಮತ್ತು ಧಾರ್ಮಿಕ ವಿಧಿಯಾಗಿದೆ. ಜನರು ಉಪವಾಸವನ್ನು ಧಾರ್ಮಿಕ ಆಚರಣೆಯಾಗಿ ಆಚರಿಸುತ್ತಾರೆ. ಉಪವಾಸವು ಒಂದು ಧಾರ್ಮಿಕ ಆಚರಣೆಯಾಗಿದ್ದು, ಹಬ್ಬದ ದಿನಗಳಲ್ಲಿ, ವಿಶೇಷ ಪೂಜೆಯ ದಿನಗಳಲ್ಲಿ ಉಪವಾಸವನ್ನು ಕೈಗೊಳ್ಳಲಾಗುತ್ತದೆ. ಉಪವಾಸವು ನಮ್ಮ ಮಾತಿನ ಮೇಲೆ, ನಡವಳಿಕೆಯ ಮೇಲೆ ಹಾಗೂ ನಾವು ಸೇವಿಸುವ ಆಹಾರ, ಪಾನೀಯಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಒಳಗೊಂಡಿದೆ. ಅಷ್ಟು ಮಾತ್ರವಲ್ಲದೇ ಕೆಲವರು ತಮ್ಮ ಜೀವನದ ಆತ್ಮೀಯರ ಉತ್ತಮ ಸ್ವಾಸ್ಥ್ಯಕ್ಕಾಗಿಯೂ ಉಪವಾಸವನ್ನು ಕೈಗೊಳ್ಳುತ್ತಾರೆ.

ಹಿಂದೂ ವೇದಗಳಲ್ಲಿ, ಉಪನಿಷತ್ತುಗಳಲ್ಲಿ ಮತ್ತು ಪುರಾಣಗಳಲ್ಲಿ ಉಪವಾಸಕ್ಕೆ ಅದರದ್ದೇ ಆದ ಮಹತ್ವವಿದೆ. ಋಗ್ವೇದದಲ್ಲಿ ಉಪವಾಸ ಎನ್ನುವ ಪದವನ್ನು ಸುಮಾರು 200 ಬಾರಿ ನೋಡಬಹುದು. ಧರ್ಮಗ್ರಂಥಗಳಲ್ಲಿ ಉಪವಾಸವು ತ್ಯಾಗವಾದರೆ, ಉಪನಿಷತ್ತುಗಳಲ್ಲಿ ನೈತಿಕತೆಯ ಮತ್ತು ನಡವಳಿಕೆಯ ಶಿಸ್ತು ಎಂದರ್ಥ. ಪುರಾಣವು ಉಪವಾಸವನ್ನು ಮನಸ್ಸನ್ನು ಸಶಕ್ತಗೊಳಿಸುವ ಅಭ್ಯಾಸವೆಂದು ಪರಿಗಣಿಸುತ್ತದೆ ಹಾಗೂ ಧರ್ಮವು ಇದನ್ನು ಮುಕ್ತಾಯದ ಕ್ರಿಯೆಯೆಂದು ಪರಿಗಣಿಸುತ್ತದೆ.

ಹಿಂದೂ ಧರ್ಮೀಯರು ಆಚರಿಸುವ ಕೆಲವೊಂದು ಸಾಮಾನ್ಯ ವ್ರತಗಳು ಅಥವಾ ಉಪವಾಸಗಳು ಜ್ಯೋತಿಷ್ಯವನ್ನು ಆಧರಿಸಿದೆ. ಕೆಲವರು ಭಾನುವಾರದಂದು ಉಪವಾಸವನ್ನು ಮಾಡಿದರೆ ಇನ್ನು ಕೆಲವರು ಸೋಮವಾರದಂದು ಉಪವಾಸವನ್ನು ಮಾಡುತ್ತಾರೆ. ಹಾಗೂ ಪ್ರದೋಷ ಮತ್ತು ಏಕಾದಶಿ ವ್ರತವು ನಿರ್ದಿಷ್ಟ ಹುಣ್ಣಿಮೆಯ ದಿನ ಬರುತ್ತದೆ. ಅದಾಗ್ಯೂ ನಾವು ಆಚರಿಸುವ ಉಪವಾಸಗಳಲ್ಲಿ ಕೆಲವೊಂದು ವಿಶೇಷ ಉಪವಾಸಗಳಾಗಿವೆ. ಇದು ಹಿಂದೂ ಧರ್ಮೀಯರ ಉಪವಾಸ ಕ್ರಮವಾದರೆ ಇನ್ನು ಮುಸ್ಲಿಂ ಧರ್ಮೀಯರು ರಂಜಾನ್‌ ಸಮಯದಲ್ಲಿ ದೀರ್ಘ ಉಪವಾಸವನ್ನು ಕೈಗೊಳ್ಳುತ್ತಾರೆ. 

ಆರ್ಯುವೇದದಲ್ಲಿ ಉಪವಾಸದ ಬಗ್ಗೆ ಕೆಲವು ತತ್ವಗಳು ಅಡಗಿವೆ. ವೈದ್ಯಕೀಯ ದೃಷ್ಟಿಯಿಂದ ಗಮನಿಸಿದಾಗ ಹಲವಾರು ಕಾಯಿಲೆಗಳು ಸಂಗ್ರಹಿಸಲ್ಪಟ್ಟ ವಿಷಪೂರಿತ ವಸ್ತುಗಳು ನಮ್ಮ ಜೀರ್ಣಂಗದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆ ವಿಷಪೂರಿತ ವಸ್ತುಗಳು ಹೊರ ಹೋಗಿ ಆರೋಗ್ಯಕ್ಕೆ ಕಾರಣವಾಗುತ್ತದೆ. ಅಲ್ಲದೆ ಜೀರ್ಣಾಂಗಗಳು ವಿಶ್ರಮಿಸಿಕೊಂಡು ಶುದ್ಧೀಕರಣಗೊಂಡು ಮುಂದಿನ ಉತ್ತಮ ಕಾರ್ಯನಿರ್ವಹಣೆಗೆ ಸಿದ್ಧವಾಗುತ್ತವೆ.
ಪೂರ್ಣನಿರಾಹಾರ ಆರೋಗ್ಯಕ್ಕೆ ಉತ್ತಮ ಮತ್ತು ಆ ಅವಧಿಯಲ್ಲಿ ಸಾಂದರ್ಭಿಕವಾಗಿ ಬಿಸಿ ನೀರಿನಿಂದ ಕೂಡಿದ ನಿಂಬೆರಸ ದೇಹದ ಉಷ್ಣತೆಯನ್ನು ಸುಧಾರಿಸುತ್ತದೆ. ಆರ್ಯವೇದದಲ್ಲಿ ದೇಹವು 80% ಶತ ನೀರಿನಿಂದ 20% ಶತ ಗಟ್ಟಿ ಪದಾರ್ಥದಿಂದ ಭೂಮಿಯಂತೆ ಕೂಡಿದೆ. ಚಂದ್ರನ ಗುರುತ್ವಾಕರ್ಷಣೆ ಹೆಚ್ಚಿಸಬಹುದು ಮತ್ತು ಜಾಗೃತಿಗೊಳಿಸುವುದು.
ಅದು ದೇಹದ ಕೊಳೆ (ಮಲ) ವಿಷರ್ಜನೆ ಮೊದಲಾದವುಗಳಿಂದ ಅಸಿಡಿಟಿಯನ್ನು ಹೋಗಲಾಡಿಸುತ್ತದೆ. ಜೊತೆಗೆ ಸಂಶೋದಕರು ಮುಖ್ಯವಾಗಿ ಆರೋಗ್ಯಕ್ಕೆ ಅಗತ್ಯವಾದಷ್ಟು ಕ್ಯಾಲರಿ ಆಹಾರವನ್ನು ಒದಗಿಸಿ ಕ್ಯಾನ್ಸರ್ ಸಕ್ಕರೆ ಕಾಯಿಲೆ, ಮಲಬದ್ಧತೆ ಮೊದಲಾದ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ.