ಡಿ.3 ರಂದು ಪೊನ್ನಂಪೇಟೆಯಲ್ಲಿ ರಾಷ್ಟ್ರೀಯ ಬಿದಿರು ನಿಯೋಗದಡಿಯಲ್ಲಿ ಸೌಕರ್ಯಗಳ ಉದ್ಘಾಟನೆ

02/12/2020

ಮಡಿಕೇರಿ ಡಿ.2 : ರಾಷ್ಟ್ರೀಯ ಕೃಷಿ ಶಿಕ್ಷಣ ದಿನ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ವತಿಯಿಂದ ವಿದ್ಯಾರ್ಥಿ ನಿಲಯ ಮತ್ತು ರಾಷ್ಟ್ರೀಯ ಬಿದಿರು ನಿಯೋಗದಡಿಯಲ್ಲಿ ಸೌಕರ್ಯಗಳ ಉದ್ಘಾಟನಾ ಕಾರ್ಯಕ್ರಮವು ಡಿಸೆಂಬರ್, 03 ರಂದು ಬೆಳಗ್ಗೆ 11 ಗಂಟೆಗೆ ಪೊನ್ನಂಪೇಟೆಯಲ್ಲಿ ನಡೆಯಲಿದೆ.
ಕೃಷಿ ಸಚಿವರಾದ ಬಿ.ಸಿ.ಪಾಟೀಲ್, ಅರಣ್ಯ, ಪರಿಸರ ಮತ್ತು ಜೀವ ವೈವಿದ್ಯ ಇಲಾಖೆಯ ಸಚಿವರಾದ ಆನಂದ್ ಸಿಂಗ್, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ನಾಯಕ್, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಎಸ್.ಎಲ್.ಬೋಜೇಗೌಡ, ಆಯನೂರು ಮಂಜುನಾಥ್ ಇತರರು ಪಾಲ್ಗೊಳ್ಳಲಿದ್ದಾರೆ.