ಪೆರಾಜೆ ಸಹಕಾರ ಸಂಘದ ವಾರ್ಷಿಕ ಮಹಾಸಭೆ : 15.13 ಲಕ್ಷ ಲಾಭ : ಸದಸ್ಯರಿಗೆ ಶೇ 4. ರಷ್ಟು ಡಿವಿಡೆಂಡ್ ಘೋಷಣೆ

02/12/2020

ಮಡಿಕೇರಿ ಡಿ. 2 : ಪೆರಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಪೆರಾಜೆಯಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ ಸಂಘವು 15.13 ಲಕ್ಷ ಲಾಭವನ್ನು ಹೊಂದಿದ್ದು, ಸದಸ್ಯರಿಗೆ ಶೇ.4 ರಷ್ಟು ಡಿವಿಡೆಂಡ್ ಹಂಚುವಂತೆ ಸಭೆಯಲ್ಲಿ ತೀರ್ಮಾನಿಸಲಾಯ್ತು.
ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಅಡಿಕೆ ಹಳದಿ ರೋಗದ ಹಿನ್ನಲೆಯಲ್ಲಿ ಸದಸ್ಯರು ಸಮಗ್ರ ಬೆಳೆ ಬೆಳೆಯುವಲ್ಲಿ ಸಂಸ್ಥೆಯ ವತಿಯಿಂದ ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಿದ್ದೇವೆ. ಮಣ್ಣು ಪರೀಕ್ಷೆ ಮಾಡುವ ಮುಖಾಂತರ ಸರಿಯಾದ ಪ್ರಮಾಣದಲ್ಲಿ ಗೊಬ್ಬರ ನೀಡಿ ಮಣ್ಣಿನ ಪಲವತ್ತತೆ ಕಾಪಾಡುವಲ್ಲಿ ಸದÀಸ್ಯರು ಒತ್ತು ನೀಡಬೇಕು, ಮಣ್ಣು ಪರೀಕ್ಷೆ ಮಾಡಿ ಅರ್ಜಿ ನೀಡಿದ್ದಲ್ಲಿ ಶೇ.50 ಸಹಾಯಧನವನ್ನು ಸಂಸ್ಥೆಯ ಮುಖಾಂತರ ಭರಿಸುವ ಬಗ್ಗೆ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಲೋಕನಾಥ್ ಅಮಚೂರು, ತೇಜಪ್ರಸಾದ್ ಅಮಚೂರು, ಹೊನ್ನಪ್ಪ ಕೊಳಂಗಾಯ, ಹೊನ್ನಪ್ಪ ಅಮಚೂರು, ಆನಂದ ಆರ್.ಡಿ, ನಂಜಪ್ಪ ನಿಡ್ಯಮಲೆ, ಕೆ.ಬಿ.ಚಂದ್ರಶೇಖರ, ದನಂಜಯ ಕೋಡಿ, ಪುಂಡರೀಕ ಹೊದ್ದಟ್ಟಿ ಮತ್ತಿತರ ಸದಸ್ಯರು ಸಲಹೆ ಸೂಚನೆಗಳಿತ್ತು ಸಂಸ್ಥೆಯ ಪ್ರಗತಿಯನ್ನು ಶ್ಲಾಘಿಸಿದರು.
ಉಪಾಧ್ಯಕ್ಷ ಮೋನಪ್ಪ ಎನ್.ಬಿ, ನಿರ್ದೇಶಕರುಗಳಾದ ಅಶೋಕ ಪಿ.ಎಂ, ಪ್ರಸನ್ನ ನೆಕ್ಕಿಲ, ಗಾಂಧೀ ಪ್ರಸಾದ್ ಬಂಗಾರಕೋಡಿ, ದೀನರಾಜ ದೊಡ್ಡಡ್ಕ, ಜಯರಾಮ ಪಿ.ಟಿ, ಶೇಷಪ್ಪ ನಾಯ್ಕ ನಿಡ್ಯಮಲೆ, ಪ್ರಮಿಳಾ ಎನ್. ಬಂಗಾರಕೋಡಿ, ರೇಣುಕಾ ಕುಂದಲ್ಪಾಡಿ, ಉದಯಕುಮಾರ ಪಿ.ಎ, ದಾಸಪ್ಪ ಮಡಿವಾಳ ಮತ್ತು ಕಿರಣ ಬಂಗಾರ ಕೋಡಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ವಿಶ್ವದೀಪ್ ಕುಂದಲ್ಪಾಡಿ ಪ್ರಾರ್ಥಿಸಿದರು, ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಕೆ ಲೋಕೇಶ್ ಸರ್ವರನ್ನು ಸ್ವಾಗತಿಸಿದರು. ನಿರ್ದೇಶಕರಾದ ಪ್ರಮೀಳ ಎನ್ ಬಂಗಾರಕೋಡಿ ವಂದನಾರ್ಪನೆಗೈದರು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯ್ತು.