ವಾಕ್ ಮತ್ತು ಶ್ರವಣ ಸಮಸ್ಯೆಗಳ ಕುರಿತು ಜಾಗೃತಿ : ವರ್ಚುವಲ್ ಪ್ಯಾನಲ್ ಚರ್ಚೆಗೆ ಗುರುವಾರ ಚಾಲನೆ

02/12/2020

ಮಡಿಕೇರಿ ಡಿ.2 : “ವಾಕ್ ಮತ್ತು ಶ್ರವಣ- ಜೀವಿತಾವಧಿಯಲ್ಲಿ ಸ್ವತ್ತುಗಳು” ಎಂಬ ಘೋಷ ವಾಕ್ಯದೊಂದಿಗೆ ಭಾರತೀಯ ವಾಕ್ ಮತ್ತು ಶ್ರವಣ ಸಂಘ (Indian Speech and Hearing Association – ISHA) ಡಿ.1 ರಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಡಿ.15 ರವರೆಗೆ ಅರಿವು ಮೂಡಿಸಲಾಗುವುದು ಎಂದು ಆಡಿಯಾಲಜಿಸ್ಟ್ ಮುಂಡೋಟಿರ ಅಚ್ಚಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಾಕ್ ಮತ್ತು ಶ್ರವಣ ಸಮಸ್ಯೆಗಳ ಕುರಿತು ಜಾಗೃತಿಯನ್ನು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಘದ ಸದಸ್ಯರು ಸಂವಹನ ಅಸ್ವಸ್ಥತೆ ಹೊಂದಿರುವವರ ಅಗತ್ಯಗಳನ್ನು ಪೂರೈಸಲಿದ್ದಾರೆ.
ಶ್ರವಣದೋಷವುಳ್ಳ ಮಗುವನ್ನು ಮಾತನಾಡಲು ಕಲಿಸುವುದು, ಪಾಶ್ರ್ವವಾಯುವಿನ ನಂತರ ಮಾತನಾಡುವ ಸಾಮಥ್ರ್ಯವನ್ನು ಕಳೆದುಕೊಂಡಿರುವವರು, ತೊದಲುವಿಕೆ ಇರುವ ಮಕ್ಕಳು ಅಥವಾ ಉಚ್ಛರಣೆಯ ಸಮಸ್ಯೆ ಇರುವ ಮಗು, ಕ್ಯಾನ್ಸರ್ ರೋಗದ ಕಾರಣಕ್ಕಾಗಿ ಶಸ್ತ್ರಚಿಕಿತ್ಸೆ ಮೂಲಕ ಧ್ವನಿ ಪೆಟ್ಟಿಗೆ ತೆಗೆದುಹಾಕಿರುವವರಿಗೆ ಅಲ್ಲದೆ ಶ್ರವಣ ದೋಷ ಉಳ್ಳವರೆಲ್ಲರಿಗೂ ವಾಕ್ ಚಿಕಿತ್ಸೆ ಮತ್ತು ಪುನರ್ವಸತಿಗೆ ಆಡಿಯಾಲಜಿಸ್ಟ್ ಹಾಗೂ ವಾಕ್ ತಜ್ಞರು ಸಹಾಯ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಸುಮಾರು 100 ಮಿಲಿಯನ್ ಜನರಿಗೆ ವಾಕ್ ಅಥವಾ ಶ್ರವಣ ದೋಷವಿದೆ ಎಂದು ಡಬ್ಲ್ಯುಎಚ್‍ಒ ಅಂದಾಜಿಸಿದೆ. ಈ ಪರಿಸ್ಥಿತಿ ಸುಧಾರಿಸದೆ ಇದ್ದರೆ ಮಾನವ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿದೆ. ಈ ಸಂವಹನ ಅಸ್ವಸ್ಥತೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅವುಗಳನ್ನು ನಿವಾರಿಸುವಲ್ಲಿ ಆಡಿಯಾಲಜಿಸ್ಟ್ ಹಾಗೂ ವಾಕ್ ತಜ್ಞರ ಪಾತ್ರ ಬಹಳ ಮುಖ್ಯವಾಗಿದೆ.
ವರ್ಚುವಲ್ ಪ್ಯಾನಲ್ ಚರ್ಚೆ ನಡೆಸುವ ಮೂಲಕ ವಾಕ್ ಮತ್ತು ಶ್ರವಣ ಸಮಸ್ಯೆಗಳ ವಿವಿಧ ಅಂಶಗಳ ಬಗ್ಗೆ ಜಾಗೃತಿ ಮೂಡಿಸಲು ಇಶಾ ಸಂಸ್ಥೆ ಬಯಸಿದೆ. ರಾಷ್ಟ್ರವ್ಯಾಪಿ ಚರ್ಚಾ ಕಾರ್ಯಕ್ರಮವನ್ನು ಲೋಕಸಭಾ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಡಿ.3 ರಂದು ಸಂಜೆ 7 ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಶಿಕ್ಷಣವನ್ನು ಗುರಿಯಾಗಿರಿಸಿಕೊಂಡು ಶ್ರವಣ ನಷ್ಟ, ಪಾಶ್ರ್ವವಾಯು, ನುಂಗುವ ತೊಂದರೆ, ಟಿನ್ನಿಟಸ್, ಶ್ರವಣ ಸಾಧನಗಳು, ಕೋಕ್ಲರ್ ಇಂಪ್ಲಾಂಟ್, ತೊದಲುವಿಕೆ ಹಾಗೂ ಇತರ ವಾಕ್ ಮತ್ತು ಶ್ರವಣ ಸಮಸ್ಯೆಗಳ ಬಗ್ಗೆ ವರ್ಚುವಲ್ ಪ್ಯಾನಲ್ ಚರ್ಚೆಗಳು ನಡೆಯಲಿವೆ.
ಯೂಟ್ಯೂಬ್ ಮತ್ತು ಜೂಮ್ ಆಪ್ ಮೂಲಕ ಡಿ.15 ರವರೆಗೆ ಸಂಜೆ 7 ರಿಂದ 9 ಗಂಟೆಯವರೆಗೆ ಚರ್ಚೆ ನಡೆಸಲಾಗುತ್ತದೆ. ಆಸಕ್ತರು ಈ ಲಿಂಕ್‍ಗೆ

https://zoom.us/j/97848354406?pwd=VDBjbG8yNnBUdjZjTVpUVUMwcE5Xdz09
  • ಯೂಟ್ಯೂಬ್ * -ಐಶಾ ವಾರ್ಷಿಕಗಳು
https://bit.ly/365iatm
  • ಲಾಗ್ ಇನ್ ಮಾಡಬಹುದು ಅಥವಾ ಹೆಚ್ಚಿನ ವಿವರಗಳಿಗಾಗಿ ತಮ್ಮ ಮೊಬೈಲ್ ಸಂಖ್ಯೆ 8867625286 ನ್ನು ಸಂಪರ್ಕಿಸಬಹುದು ಎಂದು ಅಚ್ಚಯ್ಯ ಹೇಳಿದ್ದಾರೆ.