ಮುಂದಿನ ವಾರದಿಂದಲೇ ಲಸಿಕೆ ಲಭ್ಯ

03/12/2020

ಬರ್ಲಿನ್ ಡಿ. 3 : ಟರ್ಕಿಯ ಮೂಲದ ಪತಿ-ಪತ್ನಿ ತಂಡವೊಂದು ಪ್ರಾರಂಭಿಸಿದ ಸಣ್ಣ ಜರ್ಮನ್ ಬಯೋಎನ್‍ಟೆಕ್ ಸಂಸ್ಥೆ ಈ ಮೊದಲು ಯಾವುದೇ ಲಸಿಕೆಯನ್ನು ಮಾರುಕಟ್ಟೆಗೆ ತಂದಿರಲಿಲ್ಲ. ಆದರೆ ಕೊರೋನಾದಂತಾ ಮಹಾಮಾರಿಗೆ ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ.
ಹೌದು, ಅಮೆರಿಕಾ ಪಾಲುದಾರ ಫಿಜರ್ ಜೊತೆಗೆ, ಬಯೋಟೆಕ್ ಸಂಸ್ಧೆ ಅಭಿವೃದ್ಧಿ ಪಡಿಸಿರುವ ಕೋವಿಡ್ -19 ಲಸಿಕೆಗೆ ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದ್ದು ಮುಂದಿನ ವಾರದಿಂದಲೇ ಲಸಿಕೆ ಲಭ್ಯವಾಗಲಿದೆ.
ಮೈನ್ಜ್ ಮೂಲದ ಬಯೋಟೆಕ್ ಅನ್ನು 2008 ರಲ್ಲಿ ಉಗುರ್ ಸಾಹಿನ್ ಮತ್ತು ಅವರ ಪತ್ನಿ ಓಜ್ಲೆಮ್ ತುರೆಸಿ, ಟರ್ಕಿಯಿಂದ ಜರ್ಮನಿಗೆ ವಲಸೆ ಬಂದಿದ್ದರು. ನಂತರ ಆಸ್ಟ್ರಿಯಾದ ಕ್ಯಾನ್ಸರ್ ತಜ್ಞ ಕ್ರಿಸ್ಟೋಫ್ ಹ್ಯೂಬರ್ ಜೊತೆ ಸೇರಿ ಬಯೋಎನ್‍ಟೆಕ್ ಅನ್ನು ಸ್ಥಾಪಿಸಿದ್ದರು.
ಸಾಮಾನ್ಯ ಸಮಯಗಳಲ್ಲಿ, ಬಯೋಟೆಕ್ ಮತ್ತು ಅದರ ಸರಿಸುಮಾರು 1,500 ಉದ್ಯೋಗಿಗಳು ಕ್ಯಾನ್ಸರ್ ರೋಗಿಗಳಿಗೆ ವಿಶೇಷವಾದ ಇಮ್ಯುನೊಥೆರಪಿಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದ್ದರು. “ಮೆಸೆಂಜರ್ ಆರ್ ಎನ್‍ಎ” (ಎಮ್‍ಆರ್‍ಎನ್‍ಎ) ಅಣುಗಳ ಆಧಾರದ ಮೇಲೆ ಜೀವಕೋಶಗಳಲ್ಲಿ ಪೆÇ್ರೀಟೀನ್‍ಗಳ ನಿರ್ಮಾಣವನ್ನು ಪ್ರಚೋದಿಸುತ್ತದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.