ರಾಷ್ಟ್ರಗೀತೆ ಬದಲಾವಣೆಗೆ ಸ್ವಾಮಿ ಪತ್ರ

03/12/2020

ನವದೆಹಲಿ ಡಿ.3 : ನಮ್ಮ ರಾಷ್ಟ್ರಗೀತೆ `ಜನ ಗಣ ಮನ’ ವನ್ನು ಬದಲಾಯಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಸ್ತುತ ಇರುವ ರಾಷ್ಟ್ರಗೀತೆಯನ್ನು ಬದಲಾಯಿಸಬೇಕೆಂದು ಕೋರಿ ಪ್ರಧಾನಿ ನರೇಂದ್ರಮೋದಿ ಅವರಿಗೆ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಬರೆದಿರುವ ಪತ್ರ ತೀವ್ರ ಚರ್ಚೆಯ ವಿಷಯವಾಗಿದೆ.
ರಾಷ್ಟ್ರಗೀತೆಯಲ್ಲಿ ಕೆಲ ಅನಗತ್ಯ ಪದಗಳು ಸೇರಿಕೊಂಡಿವೆ, ಗೀತೆಯಲ್ಲಿರುವ ಕೆಲವು ಪದಗಳಿಗೆ ಸಂಬಂಧಿಸಿದ ಪ್ರದೇಶಗಳು ಪಾಕಿಸ್ತಾನದಲ್ಲಿರುವುದರಿಂದ ಆ ಅನಗತ್ಯ ಪದಗಳನ್ನು ರಾಷ್ಟ್ರಗೀತೆಯಿಂದ ತೆಗೆದುಹಾಕುವಂತೆ ಕೋರಿ ಸುಬ್ರಮಣ್ಯಸ್ವಾಮಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಜನಗಣಮನ ಗೀತೆ ಹಾಡಿದಾಗ ಯಾರನ್ನೂ ಪ್ರಶಂಸಿಸಿ ಬರೆಯಲಾಗಿದೆ ಎಂಬ ಅನುಮಾನವನ್ನು ಡಾ. ಸ್ವಾಮಿ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ಆ ಸ್ಥಾನದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಇಂಡಿಯನ್ ನ್ಯಾಷನಲ್ ಆರ್ಮಿ 1943ರ ಅಕ್ಟೋಬರ್ 21 ರಂದು ಇಂಫಾಲ್ ಅನ್ನು ವಶಪಡಿಸಿಕೊಂಡಾಗ ಹಾಡಿದ ಗೀತೆಯನ್ನು ಜಾರಿಗೊಳಿಸಬೇಕೆಂದು ಪತ್ರದಲ್ಲಿ ಹೇಳಿದ್ದಾರೆ.