ಮಾಜಿ ನ್ಯಾಯಾಧೀಶ ಸಿ.ಎಸ್.ಕರ್ಣನ್ ಬಂಧನ

December 3, 2020

ಚೆನ್ನೈ ಡಿ.3 : ಕಲ್ಕತ್ತಾ ಹೈಕೋರ್ಟ್ ಮಾಜಿ ನ್ಯಾಯಾಧೀಶ ಜಸ್ಟಿಸ್ ಸಿ.ಎಸ್.ಕರ್ಣನ್ ಅವರನ್ನು ಸೈಬರ್ ಕ್ರೈಮ್ ಪೆÇಲೀಸರು ಬುಧವಾರ ಚೆನ್ನೈನಲ್ಲಿ ಬಂಧಿಸಿದ್ದಾರೆ.
ಕರ್ಣನ್ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ ಒಂದು ತಿಂಗಳ ನಂತರ, ಸೈಬರ್ ಅಪರಾಧ ವಿಭಾಗವು ಅವರನ್ನು ಚೆನ್ನೈ ಉಪನಗರ ಆವಡಿಯಲ್ಲಿ ಬಂಧಿಸಿದೆ.
ನ್ಯಾಯಮೂರ್ತಿಗಳಾದ ಎಂ.ಸತ್ಯನಾರಾಯಣನ್ ಮತ್ತು ಆರ್.ಹೇಮಲತಾ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್‍ನ ವಿಭಾಗೀಯ ಪೀಠವು ತಮಿಳುನಾಡು ಮತ್ತು ಪುದುಚೇರಿಯ ಬಾರ್ ಕೌನ್ಸಿಲ್ ಸಲ್ಲಿಸಿದ ಪ್ರಕರಣದ ಕುರಿತು ಕರ್ಣನ್ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬವಾದ ಕಾರಣ ಪೆÇಲೀಸರನ್ನು ಪ್ರಶ್ನಿಸಿದ ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಅ.27 ರಂದು ಮದ್ರಾಸ್ ಹೈಕೋರ್ಟ್‍ನ ವಕೀಲರ ದೂರಿನ ಹಿನ್ನೆಲೆಯಲ್ಲಿ ಚೆನ್ನೈ ಪೆÇಲೀಸ್ ಸೈಬರ್ ಸೆಲ್ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಿರಿಯ ಅಧಿಕಾರಿಯೊಬ್ಬರು ಹೇಳಿದಂತೆ ಕರ್ಣನ್ ಮಹಿಳೆಯರ ವಿರುದ್ಧ ಆಕ್ಷೇಪಾರ್ಹಹೇಳಿಕೆ ನೀಡುತ್ತಿದ್ದಾರೆ ನ್ಯಾಯಾಂಗ ಅಧಿಕಾರಿಗಳು ಮತ್ತುಅವರ ಸಹೋದ್ಯೋಗಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಹೊರಿಸಿ ಮದ್ರಾಸ್ ಹೈಕೋರ್ಟ್ ನ ಹಿರಿಯ ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಎ ಬೊಬ್ಡೆ ಅವರಿಗೆ ಪತ್ರ ಬರೆದಿದ್ದರು.

error: Content is protected !!