ಕ್ರಿಕೆಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಅಗ್ರ

03/12/2020

ನವದೆಹಲಿ ಡಿ.3 : ಐಸಿಸಿ ಟಿ-20 ಕ್ರಿಕೆಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಅಗ್ರಸ್ಥಾನಕ್ಕೇರಿದ್ದು ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ದಕ್ಷಿಣ ಆಫ್ರಿಕಾ ವಿರುದ್ಧ 3?0 ಕ್ಲೀನ್ ಸ್ವೀಪ್ ಮಾಡುವ ಮೂಲಕ, ಇಂಗ್ಲೆಂಡ್ ಟಿ-20 ಶ್ರೇಯಾಂಕದಲ್ಲಿ ಪ್ರಥಮ ಸ್ಥಾನದಲ್ಲಿದೆ. ಟಿ20 ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲು ಇಂಗ್ಲೆಂಡ್ 271 ಪಾಯಿಂಟ್‍ಗಳನ್ನು ಹೊಂದಿತ್ತು ಮತ್ತು ಸರಣಿಯನ್ನು ಗೆದ್ದ ನಂತರ 275ಕ್ಕೆ ಏರಿದೆ.
ಟಿ20 ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು 266 ಅಂಕ ಗಳಿಸಿರುವ ಭಾರತ ಮೂರನೇ ಸ್ಥಾನ, ಪಾಕಿಸ್ತಾನ ನಾಲ್ಕನೇ, ದಕ್ಷಿಣ ಆಫ್ರಿಕಾ ಐದನೇ ಮತ್ತು ನ್ಯೂಜಿಲೆಂಡ್ ಆರನೇ ಸ್ಥಾನದಲ್ಲಿದೆ.