ಡಿ. 4 ರಂದು “ಶುಭಂ” ಎಲೆಕ್ಟ್ರಾನಿಕ್ ಶೋ ರೂಂ ಉದ್ಘಾಟನೆ

03/12/2020

ಮಡಿಕೇರಿ ಡಿ. 3 : ಅಲಂಕಾರಿಕ ಹಾಗೂ ಗೃಹೋಪಯೋಗಿ ವಸ್ತುಗಳ ಸಂಸ್ಥೆಯಾದ ಶುಭಂ ಎಲೆಕ್ಟ್ರಾನಿಕ್ ಶೋ ರೂಂ ಡಿ. 4 ರಂದು ನಗರದ ನೂತನ ಖಾಸಗಿ ಬಸ್‍ನಿಲ್ದಾಣದ ಸಮೀಪ ಶುಭಾರಂಭಗೊಳ್ಳಲಿದೆ.
ಬೆಳಿಗ್ಗೆ 9.30ಕ್ಕೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚಯ್ಯ ಹಾಗೂ ಹಿರಿಯರಾದ ಬೇಬಿ ಮಂದಣ್ಣ ಶೋ ರೂಂಅನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಎಂಎಲ್‍ಸಿ ಸುನೀಲ್ ಸುಬ್ರಮಣಿ, ಕೊಡಗು ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಶುಭಂ ಗ್ರೂಪ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಪತ್ ಕೊಠಾರಿ ಭಾಗವಹಿಸಲಿದ್ದಾರೆ.