ಮೂರ್ನಾಡಿನ ಬೇತ್ರಿ ಬಳಿ ಭೀಕರ ಅಪಘಾತ : ಇಬ್ಬರು ದುರ್ಮರಣ

04/12/2020

ಮಡಿಕೇರಿ ಡಿ. 4 : ಮಾರುತಿ ಓಮ್ನಿ ಮತ್ತು ಗೂಡ್ಸ್ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ವ್ಯಕ್ತಿಗಳು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಮೂರ್ನಾಡು ಗ್ರಾಮದ ನಿವಾಸಿಗಳಾದ ರಮೇಶ್(44) ಹಾಗೂ ಸುಬ್ರಮಣಿ(46) ಎಂಬುವವರೇ ಸಾವನ್ನಪ್ಪಿರುವ ದುರ್ದೈವಿಗಳು. ಮಡಿಕೇರಿ ಮತ್ತು ವಿರಾಜಪೇಟೆಯನ್ನು ಸಂಪರ್ಕಿಸುವ ರಸ್ತೆಯ ನಡುವಿನಲ್ಲಿ ಬರುವ ಬೇತ್ರಿಯಲ್ಲಿ, ದುರ್ಘಟನೆ ನಡೆದಿದ್ದು, ಓಮ್ನಿಯಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.