ಮಡಿಕೇರಿಯಲ್ಲಿ “ಶುಭಂ ಶೋ ರೂಂ” ಶುಭಾರಂಭ : ಗುಣಮಟ್ಟ ಕಾಯ್ದುಕೊಳ್ಳಲು ಹೆಚ್.ಎಸ್.ಚಂದ್ರಮೌಳಿ ಸಲಹೆ

04/12/2020

ಮಡಿಕೇರಿ ಡಿ.4 : ನಗರದ ನೂತನ ಖಾಸಗಿ ಬಸ್‍ನಿಲ್ದಾಣದ ಸಮೀಪ ಅಲಂಕಾರಿಕ ಹಾಗೂ ಗೃಹೋಪಯೋಗಿ ವಸ್ತುಗಳ ಸಂಸ್ಥೆಯಾದ “ಶುಭಂ” ಎಲೆಕ್ಟ್ರಾನಿಕ್ ಶೋ ರೂಂ ನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚಯ್ಯ ಹಾಗೂ ಹಿರಿಯರಾದ ಬೇಬಿ ಮಂದಣ್ಣ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ ಅವರು, ಇಂದಿನ ವೈಜ್ಞಾನಿಕ ಮತ್ತು ವೇಗದ ಯುಗದಲ್ಲಿ ಜನರಿಗೆ ಉಪಯುಕ್ತ ಗೃಹೋಪಯೋಗಿ ವಸ್ತುಗಳ ಅಗತ್ಯತೆ ಇದ್ದು, ಗ್ರಾಹಕರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ವಸ್ತುಗಳ ಗುಣಮಟ್ಟವನ್ನು ಕಾಯ್ದುಕೊಂಡಾಗ ಮಾತ್ರ ಉತ್ತಮ ಸೇವೆಯನ್ನು ನೀಡಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಶುಭಂ ಶೋ ರೂಂ ನ ಪ್ರಧಾನ ವ್ಯವಸ್ಥಾಪಕ ನಂದಕುಮಾರ್ ಮಾತನಾಡಿ, ಎರಡನೇಯ ಶೋ ರೂಂ ಇದಾಗಿದ್ದು, ಕುಶಾಲನಗದಲ್ಲಿ ಈಗಾಗಲೇ ನಮ್ಮ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ವಿರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ಕೂಡ ಶಾಖೆ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಶುಭಂ ಗ್ರೂಪ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಪತ್ ಕೊಠಾರಿ, ಆವ್ನಿ ಎಂಟರ್‍ಪ್ರೈಸಸ್ ನ ಮಾಲೀಕರಾದ ಗುರು ಪೂವಯ್ಯ ಹಾಗೂ ವಿಕಾಸ್ ಅಚಯ್ಯ, ಮಡಿಕೇರಿ ಕೊಡವ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಕಲ್ಚರ್ ಆಂಡ್ ರಿಕ್ರಿಯೇಷನ್ ಕ್ಲಬ್‍ನ ಅಧ್ಯಕ್ಷ ಮೂವೇರ ಶಂಭು ಸುಬ್ಬಯ್ಯ, ಪ್ರಮುಖರಾದ ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಶಾಂತೆಯಂಡ ಅಚ್ಚಯ್ಯ, ಬೊಳ್ಳಜಿರ ಬಿ.ಅಯ್ಯಪ್ಪ ಮತ್ತಿತರರು ಹಾಜರಿದ್ದು “ಶುಭಂ” ಶೋ ರೂಮ್ ಗೆ ಶುಭ ಕೋರಿದರು.